See also 2abort
1abort ಅಬಾರ್ಟ್‍
ಅಕರ್ಮಕ ಕ್ರಿಯಾಪದ
  1. ಮೈಯಿಳಿ; ಗರ್ಭಪಾತವಾಗು; ಗರ್ಭಸ್ರಾವವಾಗು: she aborted ಅವಳಿಗೆ ಮೈಯಿಳಿಯಿತು.
  2. (ಜೀವವಿಜ್ಞಾನ) ಗೊಡ್ಡಾಗು; ಬರಡಾಗು.
  3. (ಜೀವವಿಜ್ಞಾನ) (ಸಸ್ಯಗಳು, ಪ್ರಾಣಿಗಳು, ಅವುಗಳ ಅಂಗಗಳು, ಜಾತಿಗಳ ವಿಷಯದಲ್ಲಿ) ಮುರುಟಿಕೊ; ಕುರುಟುಬೀಳು; ಚಿರುಟಿಹೋಗು; ಸ್ವಭಾವಿಕ ಬೆಳವಣಿಗೆ–ಕುಂಠಿತವಾಗು, ತಡೆ ಹೊಂದು.
  4. (ರೂಪಕವಾಗಿ) (ಯೋಜನೆ, ಹಂಚಿಕೆ, ಪ್ರಯತ್ನ, ಮೊದಲಾದವು) ಕೆಟ್ಟುಹೋಗು; ವ್ಯರ್ಥವಾಗು; ವಿಫಲವಾಗು; ಎಣಿಸಿದಂತೆ ನಡೆಯದೆ ಹೋಗು.
  5. (ವಿಮಾನ, ಕ್ಷಿಪಣಿ, ಮೊದಲಾದವುಗಳ ವಿಷಯದಲ್ಲಿ) ವಿಫಲಗೊಳ್ಳು; ಅಯಶಸ್ವಿಯಾಗು; ಉದ್ದಿಷ್ಟಯಾನವನ್ನು ಯಾ ಕಾರ್ಯವನ್ನು ಮಾಡದೆ ಹೋಗು.
ಸಕರ್ಮಕ ಕ್ರಿಯಾಪದ
  1. ಬಸಿರು ತೆಗೆ; ಮೈಯಿಳಿಸು; ಗರ್ಭಪಾತಗೊಳಿಸು; ಗರ್ಭಸ್ರಾವ ಮಾಡಿಸು.
  2. (ರೂಪಕವಾಗಿ) ನಿಷ್ಫಲಗೊಳಿಸು; ವಿಫಲಗೊಳಿಸು; ವ್ಯರ್ಥಗೊಳಿಸು.
  3. (ರೂಪಕವಾಗಿ) ಮುರುಟಿಸು; ಬೆಳೆವಣಿಗೆ ಕುಂದಿಸು.
  4. (ರೋಗಿ ಮೊದಲಾದವನ್ನು) ಆರಂಭದಲ್ಲಿಯೇ ತಡೆ.
  5. (ವಿಮಾನಯಾನ, ಆಕಾಶಯಾನ, ಮೊದಲಾದವುಗಳನ್ನು ಅವುಗಳ ಕೆಲಸ ಪೂರೈಸುವುದಕ್ಕೆ ಮುಂಚೆಯೇ) ರದ್ದುಗೊಳಿಸು; ನಿಲ್ಲಿಸಿಬಿಡು.
  6. (ಕ್ಷಿಪಣಿ ಮೊದಲಾದವನ್ನು ಅವು ನಿರ್ದಿಷ್ಟವಾದ ಕೆಲಸವನ್ನು ಪೂರೈಸುವುದಕ್ಕೆ ಮುಂಚೆಯೇ) ನಾಶ ಮಾಡು; ಧ್ವಂಸ ಮಾಡು.
See also 1abort
2abort ಅಬಾರ್ಟ್‍
ನಾಮವಾಚಕ
  1. (ವಿಮಾನಯಾನ, ಕ್ಷಿಪಣಿ ಉಡಾವಣೆ, ಮೊದಲಾದವುಗಳ) ವೈಫಲ್ಯ; ಕಾರ್ಯ ನಡೆಸದೆ ಯಾ ನಡೆಸುವುದರೊಳಗೆ ಅಯಶಸ್ವಿಯಾಗುವುದು.
  2. (ಅಂಥ ಯಾನಗಳ) ರದ್ದತಿ; ಅಂತ್ಯಗೊಳಿಕೆ.