ablation ಆಬ್ಲೇಷನ್‍
ನಾಮವಾಚಕ
  1. (ಶಸ್ತ್ರವೈದ್ಯ) ವಿಚ್ಛೇದನ; ಅಂಗಚ್ಛೇದನ; ಶಸ್ತ್ರಕ್ರಿಯೆಯಿಂದ ಅಂಗವನ್ನೋ ಅಂಗಭಾಗವನ್ನೋ ಕತ್ತರಿಸಿ ತೆಗೆದು ಹಾಕುವುದು.
  2. (ಭೂವಿಜ್ಞಾನ) ಸವೆತ; ಕ್ಷಯಿಸುವಿಕೆ; ನೀರಿನ ಪ್ರಭಾವದಿಂದ ಯಾ ಕರಗುವುದರಿಂದ, ಕಲ್ಲು ಬಂಡೆಯ ಯಾ ಹಿಮನದಿಯ ಯಾ ನೀರ್ಗಲ್ಲಿನ ಹೊರಮೈ ಸವೆಯುವುದು.
  3. (ಆಕಾಶಯಾನ) ಹೆರೆತ; ಅಪಕ್ಷರಣ; ಘರ್ಷಣೆಯಿಂದ ಆಕಾಶನೌಕೆ ಮೊದಲಾದವುಗಳ ಹೊರಮೈ ಸವೆತ.