abide ಅಬೈಡ್‍
ಸಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ abode ಉಚ್ಚಾರಣೆ ಅಬೋಡ್‍, ಯಾ abided)

  1. ಎದುರಿಸು; ತಡೆ; ಪ್ರತಿರೋಧಿಸು: abide the onrush of the foe ಶತ್ರುವಿನ ದಾಳಿಯನ್ನು ಎದುರಿಸು.
  2. ಒಳಗಾಗಿರು; ಬದ್ಧವಾಗಿರು; ವಿಧೇಯನಾಗಿರು; ವಿರೋಧಿಸದೆ ಯಾ ಎದುರಾಡದೆ ಸಮ್ಮತಿಸು, ಒಪ್ಪಿಕೊ: abide the court’s judgement on it ಅದರ ಬಗ್ಗೆ ನ್ಯಾಯಾಲಯದ ತೀರ್ಪಿಗೆ ಬದ್ಧನಾಗಿರು.
  3. (ಮುಖ್ಯವಾಗಿ ನಿಷೇಧಾರ್ಥಕ ಯಾ ಪ್ರಶ್ನಾರ್ಥಕ ವಾಕ್ಯಗಳಲ್ಲಿ) ತಾಳು; ಸಹಿಸು: I cannot abide ನಾನು ತಾಳಲಾರೆ. who can abide? ಯಾರು ತಾನೇ ಸಹಿಸುತ್ತಾರೆ?
  4. (ಪ್ರಾಚೀನ ಪ್ರಯೋಗ) ಕಾಯು; ಸಿದ್ಧವಾಗಿರು; ನಿರೀಕ್ಷಿಸು: abide the coming of the Lord ಭಗವಂತನ ಬರವಿಗಾಗಿ ಕಾಯು.
ಅಕರ್ಮಕ ಕ್ರಿಯಾಪದ
  1. ಉಳಿ; ಇರು; ಸ್ಥಿರವಾಗಿರು: the earth abides for ever ಭೂಮಿ ಶಾಶ್ವತವಾಗಿರುವುದು. though much is taken much abides ಎಷ್ಟೋ ಹೋದರೂ ಇನ್ನೂ ಎಷ್ಟೋ ಉಳಿದಿದೆ.
  2. (ಪ್ರಾಚೀನ ಪ್ರಯೋಗ) ವಾಸಿಸು; ವಾಸವಾಗಿರು; ನೆಲೆಯಾಗಿರು; ನೆಲೆಸಿರು.
ನುಡಿಗಟ್ಟು

abide by (ಭೂತರೂಪ ಮತ್ತು ಭೂತಕೃದಂತ ಸಾಮಾನ್ಯವಾಗಿ abided ಎಂದೇ ಪ್ರಯೋಗ)

  1. ಪಾಲಿಸು; ಅನುಸಾರವಾಗಿ ನಡೆದುಕೊ.
  2. ಒಪ್ಪಿರು; ಸಮ್ಮತಿಸಿರು; ವಿಧೇಯನಾಗಿರು; ಬದ್ಧನಾಗಿರು.
  3. (ಒಬ್ಬನಿಗೆ, ಒಂದಕ್ಕೆ, ನಿಯಮ, ವಾಗ್ದಾನ, ಮೊದಲಾದವುಗಳಿಗೆ) ನಿಷ್ಠೆಯಿಂದಿರು; ದೃಢವಾಗಿ ಅಂಟಿಕೊಂಡಿರು.