abhorrent ಅಬ್‍ಹಾರನ್ಟ್‍
ಗುಣವಾಚಕ
  1. (ನಡವಳಿಕೆ ಮೊದಲಾದವುಗಳ ವಿಷಯದಲ್ಲಿ) ಹೇಯ; ಅಸಹ್ಯಕರ: ಜುಗುಪ್ಸೆ ಹುಟ್ಟಿಸುವ: it is abhorrent to me ಅದು ನನಗೆ ಅಸಹ್ಯ ಹುಟ್ಟಿಸುತ್ತದೆ.
  2. ಸರಿಹೊಂದದ; ಅನುಸಾರವಾಗಿರದ; ವಿರುದ್ಧವಾಗಿರುವ: abhorrent to the principles of law ನ್ಯಾಯದ ತತ್ತ್ವಗಳಿಗೆ ವಿರುದ್ಧವಾಗಿರುವ.
  3. (ಪ್ರಾಚೀನ ಪ್ರಯೋಗ) (ಯಾವುದೇ ವಿಷಯದಲ್ಲಿ) ಜುಗುಪ್ಸೆಪಡುವ: the Greeks were abhorrent of excess ಗ್ರೀಕರು ಅತಿರೇಕದ ಬಗ್ಗೆ ಜುಗುಪ್ಸೆ ಪಡುವವರಾಗಿದ್ದರು.
ಪದಗುಚ್ಛ

abhorrent from ದೂರವಾಗಿರುವ; ಅಸಂಗತವಾಗಿರುವ; ಅಸಮಂಜಸವಾಗಿರುವ: abhorrent from the principles of law ಕಾನೂನಿನ ತತ್ತ್ವಗಳಿಗೆ ದೂರವಾಗಿರುವ, ಅಸಮಂಜಸವಾಗಿರುವ.