abduction ಆ(ಅ)ಬ್ಡಕ್‍ಷನ್‍
ನಾಮವಾಚಕ
  1. ಅಪಹರಣ; ಹರಣ; (ಮಗು, ಹೆಂಗಸು, ಮತದಾರ, ಕಾವಲುಗಾರ, ಮೊದಲಾದ ಯಾರನ್ನೇ) ನ್ಯಾಯ ವಿರುದ್ಧವಾಗಿ ಎತ್ತಿಕೊಂಡು ಹೋಗುವುದು, ಬಲಾತ್ಕಾರವಾಗಿ ಅಪಹರಿಸುವುದು.
  2. (ತತ್ತ್ವಶಾಸ್ತ್ರ) ಸಂಭವಪಕ್ಷನ್ಯಾಯ; ಸಾಧ್ಯವಾಕ್ಯವು ಸ್ವಯಂ ಸಿದ್ಧವಾಗಿದ್ದು, ಪಕ್ಷವಾಕ್ಯವು ಕೇವಲ ಸಂಭವನೀಯವಾಗಿರುವ ತ್ರಯಾವಯವಿ ಪ್ರಕರಣ.
  3. (ಶರೀರ ವಿಜ್ಞಾನ) ಅಪಚಾಲನ; ಅಪಕರ್ಷಣ; ಅಪವರ್ತನ; ಒಂದು ಅಂಗವನ್ನು ಮುಖ್ಯವಾಗಿ ಕೈ, ಕಾಲು, ಬೆರಳು, ಮೊದಲಾದವನ್ನು ಅದರ ನಿಯತಸ್ಥಾನದಿಂದ ಆಚೆಗೆ ಸೆಳೆದುಕೊಳ್ಳುವಿಕೆ.
  4. (ರೋಗಶಾಸ್ತ್ರ) ಹುಣ್ಣಿನ ಬುಡ ಕುಗ್ಗಿ ಬಾಯಿ ತೆರೆದುಕೊಳ್ಳುವುದು.