abbey ಆಬಿ
ನಾಮವಾಚಕ

(ಬಹುವಚನ abbeys).

  1. ಆಬಿ:
    1. ಆಬಟ್‍ ಯಾ ಆಬೆಸ್‍ಳ ಅಧಿಕಾರಕ್ಕೆ ಒಳಪಟ್ಟ ಕ್ರೈಸ್ತ ಸಂನ್ಯಾಸಿನಿಯರ ಮಠ.
    2. ಅಂಥ ಮಠಗಳಲ್ಲಿರುವ ಪಾದ್ರಿಗಳ ಯಾ ಸಂನ್ಯಾಸಿನಿಯರ ಸಮೂಹ.
  2. ಚರ್ಚು; ಇಗರ್ಜಿ; ಕ್ರೈಸ್ತ ಮಠದ ಕ್ರಿಸ್ತದೇವಾಲಯ.
ಪದಗುಚ್ಛ

the Abbey (ಬ್ರಿಟಿಷ್‍ ಪ್ರಯೋಗ)

  1. ಲಂಡನ್ನಿನಲ್ಲಿರುವ ಗಾಥಿಕ್‍ ಚರ್ಚ್‍. (Westminster Abbey ಎಂದೂ ಪ್ರಯೋಗ)
  2. (ರೂಪಕವಾಗಿ) (ಈ ಚರ್ಚಿನ ಆವರಣದಲ್ಲಿ ಸಮಾಧಿಯಾಗಿರುವ ಮಹಾಪುರುಷರ ಜೊತೆ ಸಮಾಧಿಯಾಗಲು ಅರ್ಹವಾದ) ಶ್ರೇಷ್ಠ ಮರಣ; ಶ್ಲಾಘನೀಯ ಸಾವು.