abate ಅಬೇಟ್‍
ಸಕರ್ಮಕ ಕ್ರಿಯಾಪದ
  1. (ನ್ಯಾಯಶಾಸ್ತ್ರ) (ಆಜ್ಞೆ ಯಾ ಕೋರ್ಟು ಕ್ರಮವನ್ನು) ರದ್ದು ಮಾಡು; ರದ್ದುಗೊಳಿಸು; ವಜಾ ಮಾಡು.
  2. (ತೀವ್ರತೆಯನ್ನು) ತಗ್ಗಿಸು; ಇಳಿಸು; ಕಡಮೆ ಮಾಡು.
  3. (ನೋವನ್ನು) ಕಡಮೆ ಮಾಡು; ಶಮನಗೊಳಿಸು.
  4. (ಬೆಲೆ) ಇಳಿಸು; ತಗ್ಗಿಸು.
  5. (ಬೆಲೆಯ ನಿರ್ದಿಷ್ಟ ಯಾ ಅನಿರ್ದಿಷ್ಟ ಭಾಗವನ್ನು) ಕಳೆ; ತಗ್ಗಿಸು; ಬಿಟ್ಟುಬಿಡು.
  6. (ಉಪದ್ರವ, ಪೀಡೆ, ಕಾಟ, ತೊಂದರೆಯನ್ನು) ಮುಗಿಸು; ಕೊನೆಗೊಳಿಸು; ಅಂತ್ಯಗೊಳಿಸು: we must abate the smoke nuisance in our cities ನಾವು ನಮ್ಮ ನಗರಗಳಲ್ಲಿಯ ಹೊಗೆಕಾಟವನ್ನು ಕೊನೆಗೊಳಿಸಬೇಕು.
  7. (ಗತಪ್ರಯೋಗ) (ಮೊನೆಯನ್ನು, ಅಲಗನ್ನು) ಮೊಂಡು ಮಾಡು: abate the edge of the sword ಕತ್ತಿಯ ಅಲಗನ್ನು ಮೊಂಡು ಮಾಡು.
  8. (ಬಲವನ್ನು, ಶಕ್ತಿಯನ್ನು) ಕುಂದಿಸು; ಕುಗ್ಗಿಸು; ಹ್ರಾಸಗೊಳಿಸು.
ಅಕರ್ಮಕ ಕ್ರಿಯಾಪದ

(ತೀವ್ರತೆ, ಬೆಲೆ, ಪ್ರವಾಹ, ಅಂಟುರೋಗ, ಮೊದಲಾದವುಗಳ ವಿಷಯದಲ್ಲಿ) ಕುಗ್ಗು; ತಗ್ಗು; ಇಳಿ; ಕಡಮೆಯಾಗು.