Argus ಆರ್ಗಸ್‍
ನಾಮವಾಚಕ
  1. ಜಾಗರೂಕ ರಕ್ಷಕ; ಮೈಯೆಲ್ಲ ಕಣ್ಣುಳ್ಳವ; ಕಣ್ಣಲ್ಲಿ ಕಣ್ಣಿಟ್ಟು ಕಾಯುವವ.
  2. ಆರ್ಗಸ್‍:
    1. (ಗ್ರೀಕ್‍ ಪುರಾಣ) ನೂರಗಣ್ಣ; ಶತಾಕ್ಷ; ನೂರು ಕಣ್ಣುಳ್ಳ ಒಬ್ಬ ದೈತ್ಯ. Figure: argus
    2. ನವಿಲು ಜಾತಿಯ, ಬಣ್ಣದ ಹಕ್ಕಿ; ಜೀವಂಜೀವ; ಸೋಗೆ ಕೋಳಿ.
    3. ಸೋಗೆ ಪತಂಗ; ಸ್ಯಾಟರಿಡೇ ವಂಶಕ್ಕೆ ಸೇರಿದ, ರೆಕ್ಕೆಯ ಮೇಲೆ ಹಲವಾರು ಕಣ್ಣುಳ್ಳ ಒಂದು ಬಗೆಯ ಪತಂಗ.