Academy ಆಕ್ಯಾಡಮಿ
ನಾಮವಾಚಕ
  1. ಅಕಾದಮಿ; ಪ್ಲೇಟೋ ಎಂಬಾತನು ಅಥೆನ್ಸ್‍ ಪಟ್ಟಣದ ಸಮೀಪದಲ್ಲಿ ಬೋಧಿಸುತ್ತಿದ್ದ ತೋಟ.
  2. ಪ್ಲೇಟೋ ಸಿದ್ಧಾಂತ.
  3. ಪ್ಲೇಟೋವಿನ ಅನುಯಾಯಿಗಳು.
  4. (ಮುಖ್ಯವಾಗಿ ಸ್ಕಾಟ್ಲಂಡಿನ) ಪ್ರೌಢಶಾಲೆ; (ಅಮೆರಿಕನ್‍ ಪ್ರಯೋಗ) ಮಾಧ್ಯಮಿಕ ಯಾ ಪ್ರೌಢ ಶಾಲೆ: ಪ್ರಾಥಮಿಕ ಶಾಲೆಗೂ, ವಿಶ್ವವಿದ್ಯಾನಿಲಯಕ್ಕೂ ನಡುವೆ ಇರುವ ಶಿಕ್ಷಣ ಯಾ ತರಪೇತಿನ ವಿದ್ಯಾಸಂಸ್ಥೆ: Royal Military Academy ರಾಯಲ್‍ ಮಿಲಿಟರಿ ಅಕ್ಯಾಡೆಮಿ; ಇಂಗ್ಲೆಂಡಿನ ವಿಶೇಷ ಸೈನಿಕ ಶಿಕ್ಷಣಶಾಲೆ.
  5. ಅಕಾಡೆಮಿ; ಪಂಡಿತ ಪರಿಷತ್ತು; ವಿದ್ವನ್ಮಂಡಲ; ಸಾಹಿತ್ಯ, ವಿಜ್ಞಾನ, ಶಾಸ್ತ್ರ ಯಾ ಕಲೆಗಳ ಅಭಿವೃದ್ಧಿ ಪ್ರೋತ್ಸಾಹಗಳಿಗಾಗಿ ಏರ್ಪಟ್ಟಿರುವ ಪರಿಣತರ ಒಂದು ಸಂಸ್ಥೆ.
  6. (a Academy) ಅಕಾದಮಿ; ಅಧ್ಯಯನ–ಕೇಂದ್ರ, ಸ್ಥಳ.