-ad
ಉತ್ತರಪ್ರತ್ಯಯ
  1. ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ:
    1. ಸಮುದಾಯ (ಸಂಖ್ಯಾ)ವಾಚಕಗಳಲ್ಲಿ (ಹೆಸರಿಸಿದ) ಸಂಖ್ಯೆಯ ಅಂಶಗಳನ್ನುಳ್ಳ, ಅಂಶಗಳು ಸೇರಿ ಆದ ಎಂಬ ಅರ್ಥದಲ್ಲಿ: monad, dyad, triad, myriad
    2. ಸ್ತ್ರೀಯರ ನಾಮಗಳಲ್ಲಿ ಇಂಥ ತಂದೆಯ ಮಗಳು ಯಾ ಕುಟುಂಬದವಳು ಎಂಬ ಅರ್ಥದಲ್ಲಿ: Dryad, Naiad
    3. (ಕಾವ್ಯನಾಮಗಳಲ್ಲಿ) ಆ ವಿಷಯವನ್ನು ಕುರಿತ ಎಂಬ ಅರ್ಥದಲ್ಲಿ: Ilaid, Dunciad, Rosciad.
    4. (ಸಸ್ಯತಳಿಗಳಲ್ಲಿ) ಇಂಥ ವಂಶಕ್ಕೆ ಸೇರಿದ, ವಂಶೀಯ ಎಂಬರ್ಥದಲ್ಲಿ: liliad.
  2. (ಸಸ್ಯವಿಜ್ಞಾನ) ಗುಣವಾಚಕ ಮತ್ತು ಕ್ರಿಯಾವಿಶೇಷಣಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ (ಪದದ ಮೂಲಭಾಗ ಸೂಚಿಸಿದ) ಅವಯವಗಳ ಕಡೆ, ಕಡೆಗಿರುವ ಎಂಬರ್ಥಗಳಲ್ಲಿ: caudad ಬಾಲದ ಕಡೆ.