ಉನ್ನತ ಶಿಕ್ಷಣದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯು.ಜಿ.ಸಿ ಪ್ರಮುಖ ಪಾತ್ರವಹಿಸುತ್ತಿದೆ. ಈ ಪ್ರಯತ್ನಕ್ಕೆ ಒಂದು ಸಾಂಸ್ಥಿಕ ರೂಪ ನೀಡಲು ಹಾಗೂ ಮಹಿಳಾ ವಿಷಯಗಳನ್ನು ಕುರಿತು ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಉತ್ತೇಜಿಸಲು ಮಹಿಳಾ ಅಧ್ಯಯನ ಕೇಂದ್ರಗಳನ್ನು ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ 1986ರಲ್ಲಿ ಪ್ರಾರಂಭಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರ 1989ರಲ್ಲಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಒಂದು ಭಾಗವಾಗಿ ಪ್ರಾರಂಭವಾಯಿತು. ನಂತರ 1994ರಲ್ಲಿ ಸ್ವಾತಂತ್ರ್ಯ ಸ್ವಾಯತ್ತ ಕೇಂದ್ರವಾಗಿ ರೂಪುಗೊಂಡು ಮಾನವಿಕ ವಿಭಾಗಕ್ಕೆ ಸ್ಥಳಾಂತರಗೊಂಡಿತು. ಪ್ರಸ್ತುತ ಕೇಂದ್ರವು ಯು.ಜಿ.ಸಿ. ಅನುದಾನದ ನೆರವಿನಲ್ಲಿ ನಡೆಯುತ್ತಿದೆ.
ಮಹಿಳಾ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರ ಪಟ್ಟಿ :
ಪ್ರೊ. ರಾಮೇಶ್ವರಿ ವರ್ಮಾ: 1993 - 1996
ಪ್ರೊ. ಬಿ.ಜೆ. ನಾಗರಾಜ್: 1996-1997
ಪ್ರೊ. ಆರ್. ಇಂದಿರಾ: 1997-2000
ಪ್ರೊ. ಶ್ರೀಜಯ ದೇವರಾಜೇ ಅರಸ್ : 2000-02
ಪ್ರೊ. ಆರ್. ಇಂದಿರಾ : 2002-03
ಪ್ರೊ. ಎಂ. ಇಂದಿರಾ : 2003
ಪ್ರೊ. ಪದ್ಮಾಶೇಖರ್ : 2003-05
ಪ್ರೊ. ಸುನೀತ. ಕೆ.ಟಿ : 2005-08
ಪ್ರೊ. ಎಂ. ಇಂದಿರಾ : 2008-11
ಪ್ರೊ. ಎಸ್. ಎಂ. ಮಂಗಳ : 2011-15
ಪ್ರೊ. ಎನ್. ಸರಸ್ವತಿ : 2015-18
ಪ್ರೊ. ಆಶಾಮಂಜರಿ. ಕೆ.ಜೆ : 2018
ಪ್ರೊ. ಪ್ರೀತಿ ಶ್ರೀಮಂಧರ್ ಕುಮಾರ್ : 2018-2019
ಗುರಿ ಮತ್ತು ಉದ್ದೇಶಗಳು
ಗುರಿ:- ಲಿಂಗನ್ಯಾಯ, ಲಿಂಗ ಸಮಾನತೆ ತರುವುದು. ಈ ಕುರಿತು ವಿದ್ಯಾರ್ಥಿಗಳಲ್ಲಿ ಮತ್ತು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು.
ಉದ್ದೇಶಗಳು
ಬೋಧನೆ, ಸಂಶೋಧನೆ, ತರಬೇತಿ, ವಕಾಲತ್ತು, ಇವುಗಳ ಮೂಲಕ ಲಿಂಗ ಸಮಾನತೆಯ ಆಶಯವನ್ನು ಪ್ರಚಾರ ಪಡಿಸುವುದು
ಒಂದು ಶೈಕ್ಷಣಿಕ ಶಿಸ್ತಾಗಿ ಮಹಿಳಾ ಅಧ್ಯಯನವನ್ನು ಬೋಧಿಸುವುದು
ಶಿಕ್ಷಣತಜ್ಞರು, ಕ್ಷೇತ್ರ ಕಾರ್ಯಕರ್ತರು, ಚಳವಳಿಗಾರರು ಹಾಗೂ ಸಾರ್ವಜನಿಕರಿಗೆ ಅಗತ್ಯವಾದ ಸಂಪನ್ಮೂಲ ಕೇಂದ್ರವನ್ನು ಅಭಿವೃದ್ಧಿಗೊಳಿಸುವುದು
ಮಹಿಳಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರಂತರ ಸಂಶೋಧನೆಗಳನ್ನು ನಡೆಸುವುದು
ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುವಂತೆ ಜನರಿಗೆ ಜಾಗೃತಿ ಮೂಡಿಸುವುದು
ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಲಿಂಗ ತಾರತಮ್ಯ ಹಾಗೂ ಮಹಿಳೆಯರ ಅಸಮಾನ ಸ್ಥಾನ ಮಾನಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದು
ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಮಹಿಳಾ ಹಕ್ಕುಗಳು ಹಾಗೂ ಲಿಂಗ ಸೂಕ್ಷ್ಮತೆಗೆ ಸಂಬಂಧಿಸಿದಂತೆ ಸಲಹಾ ಕೇಂದ್ರವಾಗಿ ಕೆಲಸ ನಿರ್ವಹಿಸುವುದು
ಅಂತರ್ ಜ್ಞಾನ ಶಿಸ್ತಿಯ ನೆಲೆಯಲ್ಲಿ ಮಹಿಳಾ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ, ಸಮ್ಮೇಳನ, ಶಿಬಿರ, ಕಾರ್ಯಗಾರ, ವಿಶೇಷ ಉಪನ್ಯಾಸ, ಸಂವಾದ ಗೋಷ್ಠಿ, ಮಹಿಳಾ ಕೋರ್ಟ್ ಕಾರ್ಯಕ್ರಮಗಳನ್ನು ನಡೆಸುವುದು.
ಸ್ತ್ರೀವಾದಿ ವಿಶ್ಲೇಷಣೆಯುಳ್ಳ ಸಂಶೋಧನಾ ಹಾಗೂ ವಿಮರ್ಶಾ ಕೃತಿಗಳ ಪ್ರಕಟಣೆ.
ಸಂಯೋಜನೆ/ ಸಹಯೋಗ :-
ದಕ್ಷಿಣ ಭಾರತದ ಇತರೆ ಮಹಿಳಾ ಅಧ್ಯಯನ ಕೇಂದ್ರಗಳೊಂದಿಗೆ
ಮಹಿಳಾ ಸಮಖ್ಯಾ
ಸರ್ಕಾರೇತರ/ಸ್ವಯಂ ಸೇವಾ ಸಂಸ್ಥೆಗಳು
ರಾಜ್ಯ ಮಹಿಳಾ ಆಯೋಗ
ಇಂಡಿಯನ್ ಅಸೋಸಿಯೇಷನ್ ಫಾರ್ ವುಮೆನ್ಸ್ ಸ್ಟಡೀಸ್
ಸರ್ಕಾರಿ ಇಲಾಖೆಗಳು
ಇನ್‍ಸ್ಟಿಟ್ಯೂಟ್ ಫಾರ್ ಸೊಷಿಯಲ್ ಆಂಡ್ ಏಕನಾಮಿಕ್ ಚೇಂಜ್
ಆಡಳಿತ ತರಬೇತಿ ಸಂಸ್ಥೆ, ಮೈಸೂರು
ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಇತರೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳು.
The department is located at Manasagangotri postgraduate campus of the university. Click on the image below for a detailed map of the campus and the city.
To get the directions to the department scan the following QR code