ಅಣುಜೀವ ವಿಜ್ಞಾನ ವಿಭಾಗ:
ಶತಮಾನೋತ್ಸವ ಆಚರಿಸುತ್ತಿರುವ ವಿಶ್ವವಿದ್ಯಾಲಯವು 2015ರಲ್ಲಿ ಜೀವರಸಾಯನ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸ್ವತಂತ್ರ ವಿಭಾಗವಾಗಿ “ಅಣುಜೀವ ವಿಜ್ಞಾನ” ವಿಭಾಗವನ್ನು ಆರಂಭಿಸಲಾಯಿತು. ಕಳೆದ ಶತಮಾನದಲ್ಲಿ ನಡೆದ ವಿಸ್ಮಯಕಾರಿ ಆವಿಷ್ಕಾರಗಳಿಂದಾಗಿ, ಅಣುಜೀವವಿಜ್ಞಾನವೆಂಬ ಸ್ವತಂತ್ರ ವಿಭಾಗವನ್ನು ಪ್ರಾರಂಭಿಸಬೇಕೆಂದು ಹಿಂದಿನ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪನವರು ಈ ವಿಭಾಗವನ್ನು ಪ್ರಾರಂಭಿಸಿದರು.
ಜೀವಶಾಸ್ತ್ರದ ಪ್ರಮುಖ ವಿಭಾಗಗಳಾದ, ಜೀವರಸಾಯನ ಶಾಸ್ತ್ರ, ಸೂಕ್ಷ್ಮಣು ಜೀವ ವಿಜ್ಞಾನ, ಸಸ್ಯ ಮತ್ತು ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ತಳಿಶಾಸ್ತ್ರ- ಇವುಗಳು ಸೇರಿಯೇ ಈ ವಿಭಾಗದ ಉದಯವಾಯಿತು. ಪ್ರಕೃತ ಜೀವರಸಾಯನ ಶಾಸ್ತ್ರದ ಆಶ್ರಯದಲ್ಲಿಯೇ ಬೆಳೆಯುತ್ತಿರುವ ಈ ವಿಭಾಗವು, ಉಜ್ವಲ ಭವಿಷ್ಯವನ್ನು ಹೊಂದಿದ್ದು, ಈಗಾಗಲೇ ಒಂದು ತಂಡದ ವಿದ್ಯಾರ್ಥಿಗಳು ಸ್ನಾತಕರಾಗಿರುತ್ತಾರೆ. ಜೀವಶಾಸ್ತ್ರದಲ್ಲಿ ಉನ್ನತಮಟ್ಟದ ಸಂಶೋಧನೆ, ಹೊಸ ಔಷಧಿಗಳ ಆವಿಷ್ಕಾರ, ಕೃಷಿ ಮತ್ತು ತಳಿಶಾಸ್ತ್ರದ ವಿಶೇಷ ಅಧ್ಯಯನಕ್ಕೆ ಇಲ್ಲಿಯ ಪಠ್ಯಕ್ರಮಗಳು ಪೂರಕ. ಜೀವರಸಾಯನ ಶಾಸ್ತ್ರದ ಅಧ್ಯಾಪಕರುಗಳೇ ಅತಿಥಿ ಅಧ್ಯಾಪಕರ ಸಹಾಯದಿಂದ ಈ ವಿಭಾಗವನ್ನು ಪ್ರಕೃತ ನಡೆಸುತ್ತಿದ್ದಾರೆ.