ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಕ್ಯಾಂಪಸ್‍ನಲ್ಲಿ ರಸಾಯನಶಾಸ್ತ್ರ ಅಧ್ಯಯನ ವಿಭಾಗವು 1960 ರಲ್ಲಿ ಪ್ರಾರಂಭಿಸಲಾಯಿತು. 1962 ರಲ್ಲಿ ಡಾ|| ಜಿ. ನಾರಾಯಣರವರು ವಿಭಾಗದ ಮುಖ್ಯಸ್ಥರಾಗಿದ್ದರು. ಸ್ತಾತಕೋತ್ತರ ಮತ್ತು ರಸಾಯನಶಾಸ್ತ್ರ ಸಂಶೋಧನೆಗೆ ಅವಕಾಶಗಳನ್ನು ಒದಗಿಸಲಾಯಿತು. ಇವರು ಸ್ವತಃ “ಡಿಸ್ಟ್ರಿಬ್ಯೂಷನ್ ಆಫ್ ಐಸೋಮಾರ್ಫಸ್ ಸಾಲ್ಟ್ಸ್ ಬಿಟ್ವೀನ್ ಅಕ್ವೇಯಿ ಯಸ್ ಅಂಡ್ ಸಾಲಿಡ್ ಫೇಸಸ್” ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರು. ನಂತರ 1966 ರಲ್ಲಿ ಡಾ|| ಎಚ್. ಸಂಕೇಗೌಡ ರವರು ವಿಭಾಗದ ಮುಖ್ಯಸ್ಥರಾಗಿದ್ದರು. ವಿಭಾಗಕ್ಕೆ 03 ಹೊಸ ಉಪವಿಭಾಗಗಳನ್ನು ಸೇರಿಸಲಾಯಿತು. 1972 ರಲ್ಲಿ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಉಪವಿಭಾಗವನ್ನು ಪರಿಚಯಿಸಲಾಯಿತು.  ಪ್ರಸ್ತುತ ವಿಭಾಗವು ಬೋಧನೆ ಮತ್ತು ಸಂಶೋಧನಾ ಕಾರ್ಯಗಳಲ್ಲಿ ತೊಡಗಿರುವ 16 ವಿಶೇಷ ಬೋಧಕರನ್ನು ಹೊಂದಿದೆ. ವಿಭಾಗದಲ್ಲಿ ಬೋಧನೆ ಮಾಡುವುದರೊಂದಿಗೆ, ಸಂಶೋಧನಾ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲಾಯಿತು.

 

ವಿಭಾಗದಲ್ಲಿ ಎಂ.ಎಸ್ಸಿ, ಎಂ.ಫಿಲ್, ಪಿಎಚ್.ಡಿ ಪದವಿಗಳಿಗೆ ಪ್ರವೇಶಾತಿ ನಡೆಯುತ್ತದೆ. 

 

ವಿಜ್ಞಾನ ವಿಷಯದಲ್ಲಿಯೇ ಅತಿ ದೊಡ್ಡ ವಿಭಾಗವಾದ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ನಾಲ್ಕು ಪ್ರಯೋಗಾಲಯಗಳಿರುತ್ತವೆ. ಅವುಗಳು ಅನಾಲಿಟಿಕಲ್, ಇನ್‍ಆಗ್ರ್ಯಾನಿಕ್, ಆಗ್ರ್ಯಾನಿಕ್ ಮತ್ತು ಫಿಸಿಕಲ್ ಪ್ರಯೋಗಾಲಯಗಳಿದ್ದು, ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್‍ನಲ್ಲಿ 180 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ವರ್ಷಪೂರ್ತಿ 04 ಪ್ರಯೋಗಾಲಯಗಳಲ್ಲಿಯೂ ತರಗತಿಗಳು ನಡೆಯುತ್ತಿರುತ್ತವೆ. 

 

ವಿಭಾಗದಲ್ಲಿ 42 ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿಗಳು, 50 ಅರೆಕಾಲಿಕ ಸಂಶೋಧನಾ ವಿದ್ಯಾರ್ಥಿಗಳು ಇದ್ದಾರೆ. ಸುಸಜ್ಜಿತವಾದ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ, ಹಲವಾರು ಅಪರೂಪದ ಪುಸ್ತಕಗಳನ್ನು ಒಳಗೊಂಡ ಹಾಗೂ ದಿನಪೂರ್ತಿ ಪಾರಾಯಣ ಮಾಡವಂತಹ ಗ್ರಂಥಾಲಯವನ್ನು ಹೊಂದಿದೆ. 

 

ವಿವಿಧ ಕ್ಷೇತ್ರಗಳಲ್ಲಿ ಸಂಶೋಧನಾ ಕಾರ್ಯದಲ್ಲಿ 3,000 ಕ್ಕಿಂತಲೂ ಹೆಚ್ಚು ರಿಸರ್ಚ್ ಪಬ್ಲಿಕೇಷನ್ಸ್, 21,607 ಸೈಟೇಷನ್ಸ್ (Citations), 260 ಕ್ಕಿಂತಲೂ ಹೆಚ್ಚು ಪಿಎಚ್.ಡಿ ಹಾಗೂ 32 ಕ್ಕಿಂತಲೂ ಹೆಚ್ಚು ಎಂ. ಫಿಲ್ ಪದವಿಯನ್ನು ಪಡೆದಿರುತ್ತಾರೆ.

 

ವಿದ್ಯಾರ್ಥಿಗಳು ಬೋಧನಾ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಸುಸಜ್ಜಿತವಾದ ಕಂಪ್ಯೂಟರ್ ಕೊಠಡಿ (Internet Facility) ಯನ್ನು ಹೊಂದಿದೆ. ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಆಕ್ವಾಗಾರ್ಡ್ ವ್ಯವಸ್ಥೆಯನ್ನು ಮಾಡಲಾಗಿದೆ. 

 

ವಿಭಾಗದಲ್ಲಿ ಸುಸಜ್ಜಿತ ಸೆಮಿನಾರ್ ಹಾಲ್‍ನಲ್ಲಿ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ಎಂ.ಎಸ್ಸಿ ಆಗ್ರ್ಯಾನಿಕ್ ಕೆಮಿಸ್ಟ್ರಿ ವಿದ್ಯಾರ್ಥಿಗಳು ಒಳಗೊಂಡಂತೆ, ಸೆಮಿನಾರ್ ಹಾಲ್‍ನಲ್ಲಿ 300 ಜನರು ಕುಳಿತುಕೊಳ್ಳುವ ವ್ಯವಸ್ಥೆಯಿರುತ್ತದೆ. 

 

ಎಂ.ಎಸ್ಸಿ ಆಗ್ರ್ಯಾನಿಕ್ ಕೆಮಿಸ್ಟ್ರಿ ವಿಭಾಗವು, ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿಯೇ ನಡೆಯುತ್ತಿದ್ದು, ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್‍ನಲ್ಲಿ ಒಟ್ಟು 63 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 

 

ಡಾ|| ಸೂರ್ಯನಾರಾಯಣ, ಡಾ|| ಜಿ ನಾರಾಯಣ, ಡಾ|| ಎಚ್. ಶಂಕೇಗೌಡ, ಡಾ|| ಕೆ. ಎಸ್. ಸಿದ್ದಲಿಂಗಯ್ಯ, ಡಾ|| ಡಿ. ಎಸ್. ಮಹದೇವಪ್ಪ, ಡಾ|| ಎಚ್. ಎಸ್. ನಾಗರಾಜಯ್ಯ, ಡಾ|| ವೈ. ವಿ. ಆಂಜನೇಯಲು, ಡಾ|| ಎಚ್. ಎಂ. ಕೆ. ನಾಯ್ಡು, ಡಾ|| ಸಿ. ಅಂಜನಾಮೂರ್ತಿ, ಡಾ|| ಆರ್. ಶಕುಂತಲಾ, ಡಾ|| ಪಿ. ಜಿ. ರಾಮಪ್ಪ, ಡಾ|| ಬಿ. ಕೇಶವನ್, ಡಾ. ಎಸ್. ವೈ. ಅಂಬೇಕರ್, ಡಾ|| ಶಿವರಾಮ ಹೊಳ್ಳ, ಡಾ|| ಡಿ. ಚನ್ನೇಗೌಡ, ಡಾ|| ಎ. ಎಸ್. ಆನಂದಮೂರ್ತಿ, ಡಾ|| ಎನ್. ಎಂ. ಮಾದೇಗೌಡ, ಡಾ|| ರಂಗಸ್ವಾಮಿ, ಡಾ|| ಕೆ. ಎನ್. ತಿಮ್ಮಯ್ಯ, ಡಾ|| ಬಿ. ಎಂ. ಮೋಹನ, ಡಾ|| ಬಿ. ನಾರಾಯಣ ಆಚಾರ್,   ಡಾ|| ಬಿ. ಕೃಷ್ಣಮೂರ್ತಿ, ಡಾ|| ಸೈಯದ್ ಅಖೀಲ್ ಅಹಮದ್, ಡಾ|| ಕೆ. ಎಸ್. ರಂಗಪ್ಪ, ಡಾ|| ಡಿ. ಚನ್ನೇಗೌಡ, ಡಾ|| ಕೆ. ಎಂ. ಲೋಕನಾಥ ರೈ, ಡಾ|| ಕೆ. ಬಸವಯ್ಯ, ಇನ್ನೂ ಹಲವಾರು ಪ್ರಾಧ್ಯಾಪಕರು ವಿಭಾಗವು ಉನ್ನತ ಮಟ್ಟದಲ್ಲಿ ಬೆಳವಣಿಗೆಯಾಗಲು ಪ್ರಮುಖವಾಗಿ ಶ್ರಮಿಸಿದರು. 

 

ವಿಭಾಗದಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಡಾ|| ಸಿ. ಅಂಜನಾಮೂರ್ತಿ, ಡಾ|| ಎನ್. ಎಸ್. ರಾಮೇಗೌಡ, ಡಾ|| ಬಿ. ಎಸ್. ಶೆರಿಗಾರ್, ಡಾ|| ಕೆ. ಎಸ್. ರಂಗಪ್ಪ, ಡಾ|| ಬಿ. ತಿಮ್ಮೇಗೌಡ ರವರು ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ಮಾತ್ರವಲ್ಲದೇ, ವಿದೇಶಗಳಲ್ಲೂ ಅತ್ಯುನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

 

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ (DSC), ಅಣುಶಕ್ತಿ ವಿಭಾಗ (DAE), ಜೈವಿಕ ತಂತ್ರಜ್ಞಾನ ವಿಭಾಗ (DBT), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC, UPE, IOE, SAP Phase-III), ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ AICTE), ಕೈಗಾರಿಕಾ ಸಂಶೋಧನಾ ಮಂಡಳಿ (CSIR), ಮೈಸೂರು ವಿಶ್ವವಿದ್ಯಾನಿಲಯ (UOM) ಹಾಗೂ ಇನ್ನಿತರ ಸಂಸ್ಥೆಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಹಯೋಗದೊಂದಿಗೆ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದಾರೆ. ಇದಲ್ಲದೆ ರಸಾಯನಶಾಸ್ತ್ರ ಅಧ್ಯಯನ ವಿಭಾಗವು ಜಪಾನ್, ಕೊರಿಯಾ, ಫ್ರಾನ್ಸ್, ರಷ್ಯಾ, ಯುಕೆ, ದಕ್ಷಿಣಾ ಆಫ್ರಿಕಾ, ಪೋಲಂಡ್, ಇಟಲಿ, ಚೀನಾ, ಮಲೇಷಿಯಾ ಮತ್ತು ಸ್ವಿಟ್ಜರ್ಲೆಂಡ್‍ಗಳಲ್ಲಿ ಹಲವಾರು ಅಂತರರಾಷ್ಟ್ರೀಯ ಇನ್ಸಟ್ಯೂಟ್‍ಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ವಿವಿಧ ಸಂಸ್ಥೆಗಳಿಂದ ಸರಿಸುಮಾರು ರೂ. 15 ಕೋಟಿಗೂ ಹೆಚ್ಚು ಅನುದಾನವು ಮಂಜೂರಾಗಿರುತ್ತದೆ. 

 

ವಿಭಾಗದಲ್ಲಿ ಈ ಕೆಳಕಂಡ ಥ್ರಸ್ಟ್ ಏರಿಯಾದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ 

 

1. ಬಯೋ-ಇನ್ಗ್ರ್ಯಾನಿಕ್ ಅಂಡ್ ಮೆಡಿಸಿನಲ್ ಕೆಮಿಸ್ಟ್ರಿ

2. ನ್ಯಾನೊ ಮೆಟೀರಿಯಲ್ ಸಿಂಥೆಸಿಸ್ ಅಂಡ್ ಅಪ್ಲಿಕೇಷನ್ಸ್

3. ಸಿಂಥೆಟಿಕ್ ಆಗ್ರ್ಯಾನಿಕ್ ಕೆಮಿಸ್ಟ್ರಿ (ಆಂ್ಯಟಿಕ್ಯಾನ್ಸರ್ ಅಂಡ್ ಆ್ಯಂಟಿಅಲ್ಜೈಮರ್ ಡ್ರಗ್ಸ್, ಬಯಾಲಾಜಿಕಲಿ ಆ್ಯಕ್ಟೀವ್ ಪೆಪ್ಟೈಡ್ಸ್ 

  ಅಂಡ್ ಪಾಲಿಮರ್ಸ್).

4. ಬಯೊಡಿಗ್ರೇಡೇಷನ್ ಆಫ್ ಲಿಗ್ನಿನ್

5. ಕ್ರಿಸ್ಟಲ್ ಅಂಡ್ ಮಾಲಿಕ್ಯೂಲರ್ ಸ್ಟ್ರಕ್ಚರ್ ಸ್ಟಡೀಸ್

6. ಸಿಂಥೆಸಿಸ್ ಆಫ್ ಕೋಆರ್ಡಿನೇಷನ್ ಕಾಂಪೌಂಡ್ಸ್

7. ಕೈನಿಟಿಕ್ಸ್ ಆಫ್ ಬಯಾಲಾಜಿಕಲಿ ಆ್ಯಕ್ಟೀವ್ ಕಾಂಪೌಂಡ್ಸ್ ಅಂಡ್ ಕರೋಸಿನ್ ಸ್ಟಡೀಸ್

8. ಫಾರ್ಮಸಿಟಿಕಲ್ ಅಂಡ್ ಟ್ರೇಸ್ ಎಲಿಮೆಂಟ್ ಅನಾಲಿಸಿಸ್.

 

ಅಧ್ಯಾಪಕರುಗಳು ಖ್ಯಾತ ವೈಜ್ಞಾನಿಕ ನಿಯತಕಾಲಿಕೆಗಳ ಸಂಪಾದಕೀಯ ಮಂಡಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುಜಿಸಿ ಕಾರ್ಯಕ್ರಮದಡಿಯಲ್ಲಿ ರಸಾಯನಶಾಸ್ತ್ರ ಮತ್ತು ಸಂಬಂಧಿತ ವಿಷಯಗಳ ಪಠ್ಯಕ್ರಮವನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಹಣಕಾಸು ಸಂಸ್ಥೆ ಮತ್ತು ಸಣ್ಣ ಸಂಶೋಧನಾ ಯೋಜನೆಗಳನ್ನು ನಿರ್ಣಯಿಸುವ ಪೀರ್ ರಿವ್ಯೂ ಸಮಿತಿಗಳಲ್ಲಿ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

 

 

ವಿಭಾಗದಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ “ಮಾನಸ ವಸ್ತುಪ್ರದರ್ಶನ ಮತ್ತು ಅಂತರರಾಷ್ಟ್ರೀಯ ಸಮ್ಮೇಳನ” ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ವಿಭಾಗದ ಕೆಮಿಕಲ್ ಸೊಸೈಟಿವತಿಯಿಂದ ಪ್ರತಿವರ್ಷವೂ ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನುರಿತ ತಜ್ಞರನ್ನು ಕರೆಸಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರುಗಳಿಗೆ ಉಪಯೋಗವಾಗುವಂತಹ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

 

ವಿಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಹಲವಾರು ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನ, ಸೆಮಿನಾರ್, ಕಾರ್ಯಗಾರ ಮತ್ತು ರಿಫ್ರೆಷರ್ ಕೋರ್ಸ್ ಇನ್ನು ಹಲವಾರು ಕಾರ್ಯಕ್ರಮಗಳನ್ನು ಹೊರರಾಜ್ಯ ಮತ್ತು ಹೊರದೇಶಗಳ ಶೈಕ್ಷಣಿಕ ಕ್ಷೇತ್ರದಲ್ಲಿ ನುರಿತ ತಜ್ಞರಿಂದ ಉಪನ್ಯಾಸ ಏರ್ಪಡಿಸಲಾಗುತ್ತದೆ

Location

The department is located at Manasagangotri postgraduate campus of the university. Click on the image below for a detailed map of the campus and the city.


To get the directions to the department scan the following QR code