ಮೈಸೂರು ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿಭಾಗವು 1960ರ ದಶಕದಲ್ಲಿ ಕಾರ್ಯಚಟುವಟಿಕೆ ಆರಂಭಿಸಿದ್ದು ಇದುವರೆಗೆ ವಿಶ್ವವಿದ್ಯಾನಿಲಯದ ಶೈಕ್ಷಣಿಕೆ ಅಭಿವೃದ್ಧಿ ಪಥದಲ್ಲಿ ಇಂಜಿನಿಯರಿಂಗ್ ವಿಭಾಗವು ವಿವಿಧ ನಿರ್ಮಾಣ ಕ್ಷೇತ್ರದಲ್ಲಿ ಶೈಕ್ಷಣಿಕ ವರ್ಗದ ಮೂಲಭೂತ ಅವಶ್ಯಕತೆಗೆ ಅನುಗುಣವಾಗಿ ವಿವಿಧ ಕಾಲಘಟ್ಟದಲ್ಲಿ ವಿವಿಧ ಅನುದಾನ ಸಂಸ್ಥೆಗಳಾದ ಭಾರತ ಸರ್ಕಾರದ ಇಲಾಖೆಗಳು, ಕರ್ನಾಟಕ ಸರ್ಕಾರದ ಇಲಾಖೆಗಳು ಹಾಗೂ ಯು.ಜಿ.ಸಿ ಮತ್ತು ಇತರೆ ಅನುದಾನ ಇಲಾಖೆಗಳಿಂದ ಅನುದಾನ ಲಭ್ಯತೆ ಮೇರೆಗೆ ಹಲವಾರು ಶೈಕ್ಷಣಿಕ ವಿಭಾಗ ಕಟ್ಟಡಗಳು, ವಿದ್ಯಾರ್ಥಿನಿಲಯಗಳು, ಒಳಾಂಗಣ/ಹೊರಾಂಗಣ ಕ್ರೀಡಾಂಗಣಗಳು, ಸಭಾಂಗಣಗಳು, ರಸ್ತೆಗಳ ಅಭಿವೃದ್ಧಿ, ವಸತಿಗೃಹಗಳ ನಿರ್ವಹಣೆ, ಕ್ಯಾಂಟೀನ್, ವಾಣಿಜ್ಯ ಮಳಿಗೆಗಳು, ಬ್ಯಾಂಕ್ ಹಾಗೂ ಅಂಚೆ ಕಛೇರಿ ಕಟ್ಟಡಗಳು ಹಾಗೂ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ವಹಣೆ, ವಿದ್ಯುತ್, ನೀರು ಸರಬರಾಜು ವ್ಯವಸ್ಥೆ ಹಾಗೂ ಒಳಚರಂಡಿ ನಿರ್ವಹಣೆ ಇತ್ಯಾದಿ ಮೂಲಭೂತ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ.
 
    ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿಭಾಗವು ಮೈಸೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿ ವಿಶ್ವವಿದ್ಯಾನಿಲಯದ ಪ್ರಾಧಿಕಾರಗಳ ಹಾಗೂ ಮಾನ್ಯ ಕುಲಪತಿಗಳ ಮತ್ತು ಕುಲಸಚಿವರ ಆದೇಶ ಮತ್ತು ನಿರ್ದೇಶಾನುಸಾರ ನಿಯಮಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿಭಾಗವು ಈ ಕೆಳಕಂಡ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗವನ್ನು ಹೊಂದಿದ್ದು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಮೈಸೂರು ಸ್ನಾತಕೊತ್ತರ ಕೇಂದ್ರ, ಮಹರಾಜ ಮತ್ತು ಯುವರಾಜ ಕಾಲೇಜು ಆವರಣಗಳು ಮತ್ತು ಘಟಕಗಳು ಮತ್ತು ಹಾಸನ, ಮಂಡ್ಯ ಮತ್ತು ಚಾಮರಾಜನಗರ ಸ್ನಾತಕೊತ್ತರ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಿರ್ಮಾಣ ಹಾಗು ನಿರ್ವಹಣೆ ಕೆಲಸಗಳನ್ನು ಈ ವಿಭಾಗದ ವತಿಯಿಂದ ನಿರ್ವಹಿಸಲಾಗುತ್ತಿದೆ.
 
   à²®à³ˆà²¸à³‚ರು ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿಭಾಗವು ಶೈಕ್ಷಣಿಕೆ ಕಟ್ಟಡಗಳ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಜೊತೆಗೆ ಆವರಣದ ಹಸಿರೀಕರಣ ಹಾಗೂ ಸಂಪನ್ಮೂಲ ಸದ್ಬಳಕೆ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾದ, ಸೋಲಾರ್ ಶಕ್ತಿಯ ಬೀದಿ ದೀಪಗಳ ಅಳವಡಿಕೆ, ಮಳೆ ನೀರು ಕೂಯ್ಲು ಅಳವಡಿಕೆ, ವಿದ್ಯುತ್ ಎಲ್.ಇ.ಡಿ ದೀಪಗಳ ಅಳವಡಿಕೆ, ಸೋಲಾರ್ ಹೀಟರ್‍ಗಳ ಅಳವಡಿಕೆ ಹಾಗೂ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ, ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಲಾನ್ ಹಾಗೂ ತೋಟಗಾರಿಕಾ ವಲಯಕ್ಕೆ ಅವಶ್ಯಕ ನೀರು ಸರಭರಾಜು ವ್ಯವಸ್ಥೆ ಇತ್ಯಾದಿ ಕೆಲಸಗಳನ್ನು ಕೈಗೊಂಡಿದೆ.
 
ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿಭಾಗವು ವಿಶ್ವವಿದ್ಯಾನಿಲಯದ ಆದೇಶಗಳನುಸಾರ ಈ ಕೆಳಕಂಡ ಬೃಹತ್ ಕಟ್ಟಡಗಳ ನಿರ್ಮಾಣ ಹಾಗು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿರುತ್ತದೆ.1. ಕ್ರಾ¥sóÀರ್ಡ್ ಭವನದ ಒಳಾಂಗಣ ಪ್ರಾಂಗಣ ಅಭಿವೃದ್ಧಿ2. ಮೌಲ್ಯ ಭವನ ಕಟ್ಟಡ 3. ಸ್ಕೂಲ್ ಆ¥sóï ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಕಟ್ಟಡ4. ಸ್ಕೂಲ್ ಆ¥sóï ಲಾ ಕಟ್ಟಡ5. ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಕಟ್ಟಡ6. ಪುರುಷರ ವಿದ್ಯಾರ್ಥಿನಿಲಯ ಕಟ್ಟಡ, ಚಾಮರಾಜನಗರ7. ಮಹಿಳಾ ವಿದ್ಯಾರ್ಥಿನಿಲಯ ಕಟ್ಟಡ, ಹಾಸನ8. ಮಾನಸ ಅತಿಥಿಗೃಹ ವಿಸ್ತರಣಾ ಕಟ್ಟಡ9. ಮಾನಸ ಒಳಾಂಗಣ ಕ್ರೀಡಾಂಗಣ ಕಟ್ಟಡ10. ಸಮರ್‍ಮತಿ ಆಶ್ರಮ ಕಟ್ಟಡ11. ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ಕಟ್ಟಡ12. ಜೈವಿಕ ರಸಾಯನಶಾಸ್ತ್ರ ಕಟ್ಟಡ13. ಅಣು ಜೀವಶಾಸ್ತ್ರ ಕಟ್ಟಡ 14. ಎನ್.ಎಸ್.ಎಸ್ ಭವನ ಮತ್ತು ಅಂತರಾಷ್ಟ್ರೀಯ ಅತಿಥಿಗೃಹ ಕಟ್ಟಡ15. ವಸ್ತು ಸಂಗ್ರಹಾಲಯ ಕಟ್ಟಡ16. ಯುವರಾಜ ಕಾಲೇಜು ತರಗತಿ ಕೊಠಡಿಗಳ ನಿರ್ಮಾಣ17. ಕ್ಲಾಕ್ ಟವರ್ ಕಟ್ಟಡ18. ಬಯಲು ರಂಗಮಂದಿರ ಅಭಿವೃದ್ಧಿ19. ಮಾನಸಗಂಗೋತ್ರಿ ಆವರಣದಲ್ಲಿ ಮುಖ್ಯದ್ವಾರಗಳ ನಿರ್ಮಾಣ20. ಸಂಶೋಧನಾ ವಿದ್ಯಾರ್ಥಿನಿಲಯ ಕಟ್ಟಡ21. ಗಣಕವಿಜ್ಞಾನ ಅಧ್ಯಯನ ವಿಭಾಗದ ವಿಸ್ತರಣಾ ಕಟ್ಟಡ22. ಕನ್ನಡ ಅಧ್ಯಯನ ವಿಭಾಗದ ವಿಸ್ತರಣಾ ಕಟ್ಟಡ
 
    ವಿಶ್ವವಿದ್ಯಾನಿಲಯ ಇಂಜಿನಿಯರಿಂಗ್ ವಿಭಾಗವು ಮೇಲಿನಂತೆ ಈವರೆಗೆ ಹಲವಾರು ಶೈಕ್ಷಣಿಕ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಕೆಲಸಗಳನ್ನು ಕೈಗೊಂಡು ವಿಶ್ವವಿದ್ಯಾನಿಲಯದ ಆದೇಶ ಹಾಗೂ ನಿರ್ದೇಶಾನುಸಾರ ಕಾರ್ಯ ನಿರ್ವಹಿಸಲಾಗುತ್ತಿದೆ.