ವಿಶ್ವವಿದ್ಯಾನಿಲಯದ ಗಣಕ ಕೇಂದ್ರ

ಪ್ರೊ. ಸುರೇಶ
ಹುದ್ದೆ ಪ್ರಾಧ್ಯಾಪಕರು ಮತ್ತು ಸಿಸ್ಟಂ ಮ್ಯಾನೇಜರ್
ಈ-ಮೇಲ್  sureshasuvi@gmail.com
ದೂರವಾಣಿ  0821 2419324
ವಿದ್ಯಾಭ್ಯಾಸ M.Sc., M.Phil., M.Tech.(IITKGP), Ph.D (IISC)
ಪರಿಣಿತಿ ಕ್ಷೇತ್ರ Web Technology, DBMS, Internet, Opinion Mining, Image Search Engines, IOT.
ಸ್ವವಿರ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

ವಿಭಾಗದ ಬಗ್ಗೆ 

    ವಿಶ್ವವಿದ್ಯಾನಿಲಯ ಗಣಕಕೇಂದ್ರ 1980 ರಲ್ಲಿ ಸ್ಥಾಪನೆಗೊಂಡು ಇಂದಿಗೆ 37 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ಹುರುಪಿನಿಂದ 38 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 2001 ರಿಂದ ಸಂಸ್ಥೆಯು ಮಾಹಿತಿ ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ ಹಾಗೂ ಹಿರಿಯ ನಾಗರಿಕರಿಗೆ ಪೂರಕ ತರಬೇತಿಯನ್ನು ನೀಡುತ್ತಿರುವುದಲ್ಲದೆ ಕೇಂದ್ರವು ಅನೇಕ ವಿಷಯಗಳಲ್ಲಿ ವಿಚಾರಗೋಷ್ಠಿ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ, ಸಂಶೋಧನಾರ್ಥಿಗಳಿಗೆ, ವಿಶ್ವವಿದ್ಯಾನಿಲಯದ ಸಿಬ್ಬಂದಿಗಳಿಗೆ ಹಾಗೂ ಅದ್ಯಾಪಕರುಗಳಿಗೆ ನಡೆಸಲಾಗುತ್ತಿದೆ.

 

     ಡಾ.ಎ.ಎಂ.ಸುಧಾಕರ ಇವರು ಸಿಸ್ಟಮ್ ಇಂಜಿನಿಯರ್ ಹುದ್ದೆಯ ಕೆಲಸದ ಜೊತೆಗೆ ಸಿಸ್ಟಮ್ಸ್ ಮ್ಯಾನೇಜರ್ ಮತ್ತು ಮುಖ್ಯಸ್ಥರಾಗಿದ್ದಾರೆ. 2011 ರಿಂದ ಭಾರತ ಜ್ಞಾನ ಆಯೋಗ ಮತ್ತು ಎಂ.ಹೆಚ್.ಆರ್.ಡಿ ಯ ಎನ್.ಎಂ.ಐ.ಸಿ.ಟಿ. ಯೋಜನೆಯ ಅದಿಕೃತ ಟೆಕ್ನಕಲ್ ನೋಡಲ್ ಆಷೀಸರ್ ಆಗಿ ಕೆಲಸವನ್ನು ಮಾಡುತ್ತಿರುತ್ತಾರೆ. ಹಾಗೂ ಎಂ.ಎ (ಮಹಿಳಾ ಅಧ್ಯಯನ) ಮತ್ತು ಎಂ.ಎ (ಸಹಕಾರ ನಿರ್ವಹಣೆ) ಇದರ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ, ಹಾಗೂ ಗಣಕಕೇಂದ್ರದಲ್ಲಿ  ಎಸ್.ಪಿ.ಎಸ್.ಎಸ್. ತಂತ್ರಾಂಶದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಸಂಶೋಧನಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟಿರುತ್ತಾರೆ. ಡಾ ಆ ಮೈ ಸುಧಾಕರರವರು ಸೆಪ್ಟಂಬರ್ 17-19, 2015 ನಡೆದ “ಸ್ವದೇಶಿ ಕನ್ನಡ ವಿಜ್ಞಾನ ಸಮ್ಮೇಳನದ ಅಧ್ಯಕ್ಷರಾಗಿ ಮೈಸೂರು ವಿ.ವಿ.ಯಲ್ಲಿ (ಒಟ್ಟು 600 ಪ್ರಭಂದ ಲೇಖನಗಳು) ಸಮ್ಮೇಳನವನ್ನು ಯಶಸ್ವಿಯಾಗಿ ನೆರವೆರಿಸಿದ್ದಾರೆ. 2015-16 ಕ್ಕೆ ನಿಯತಕಾಲಿಕೆ ಉಪಮುಖ್ಯ ಸಂಪಾದಕರಾಗಿ ಮುಂದುವರಿದಿದ್ದಾರೆ.

 

ವಿ.ವಿ.ಗಣಕ ಕೇಂದ್ರದಲ್ಲಿ ಕಾರ್ಯ ನಿರ್ವಹಿತ್ತಿರುವವರು

1 ಸಿಸ್ಟಮ್ಸ್ ಮ್ಯಾನೇಜರ್ -01

2 ಆಧ್ಯಾಪಕೇತರರು -03

 

 

ಕೋರ್ಸ್‍ಗಳ ವಿವರ :

1. ಎಸ್.ಪಿ.ಎಸ್.ಎಸ್. ಮತ್ತು ಆರ್. ಕಾರ್ಯಗಾರ

2. ಅಲ್ಪಾವಧಿ ತರಗತಿಗಳು: ಆಫೀಸ್ ಆಟೋಮೇಷನ್, ಸಿ.ಸಿ++, ಜಾವ, ವೆಬ್ ಡಿಸೈನ್, ಸೈಬರ್  ಸೆಕ್ಯೂರಿಟಿ, ಬಿಗ್ ಡೆಟಾ

3. ಎಂ.ಎ (ಮಹಿಳಾ ಅಧ್ಯಯನ) ಮತ್ತು ಎಂ.ಎ (ಸಹಕಾರ ನಿರ್ವಹಣೆ) ಈ ವಿಭಾಗಗಳಿಗೆ ಟ್ಯಾಲಿ ತರಗತಿಗಳು 

 

 

ಸಂಪರ್ಕ : ವಿ.ವಿ.ಗಣಕ ಕೇಂದ್ರ

              ವಿ.ವಿ.ನಿಲಯದ ಗ್ರಂಥಾಲಯ ಹಿಂಭಾಗ

              ಮಾನಸ ಗಂಗೋತ್ರಿ

              ಮೈಸೂರು.

              ದೂರವಾಣಿ ಸಂಖ್ಯೆ: 0821-2419324

              ಇ-ಮೇಲ್: sureshasuvi@gmail.com