ಪರಿಸರ ವಿಜ್ಞಾನ ಅಧ್ಯಯನ ವಿಭಾಗ

ಪರಿಸರ ವಿಜ್ಞಾನ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರಿನಲ್ಲಿ 1992ರಲ್ಲಿ ಭೌತಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾರಂಭಗೊಂಡಿತ್ತು, ಡಾ. ಪಿ. ವಿ. ವೆಂಕಟರಾಮಯ್ಯರವರು ಮೊದಲನೆಯ ಸಂಯೋಜನಾಧಿಕಾರಿಯಾಗಿದ್ದು ನಂತರ ಪ್ರೊ. ಶಶಿಧರ್ ಪ್ರಸಾದ್‍ರವರು ಮತ್ತು ಡಾ. ನಾಗಪ್ಪ ರವರು 1999ರವರೆಗೆ ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ, ಪ್ರೊ. ಎಸ್. ಎಲ್. ಬೆಳಗಲಿಯವರು 1999 ರಲ್ಲಿ ವಿಭಾಗಕ್ಕೆ ಪ್ರಾಧ್ಯಾಪಕರು ಹಾಗೂ ಸಂಯೋಜನಾಧಿಕಾರಿಯಾಗಿ ನೇಮಕಗೊಂಡಿರುತ್ತಾರೆ ಹಾಗೂ 1999 ರಿಂದ 2012 ರವರೆಗೆ ಪ್ರೊ. ಬೆಳಗಲಿಯವರು ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.   

 

      2003ರಲ್ಲಿ ವಿಭಾಗವು ಸ್ವಂತ ಕಟ್ಟಡ ಹೊಂದಿದ್ದು ಇಲ್ಲಿಯವರೆಗೆ  ಸುಮಾರು 500 ವಿಧ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ, ಹಾಗೂ 90 ಮಂದಿ ಪಿ.ಹೆಚ್‍ಡಿ. ಪದವಿ ಮತ್ತು  04 ಮಂದಿ Pಆಈ ಪಡೆದಿರುತ್ತಾರೆ. ವಿಭಾಗದಿಂದ ಪದವಿ ಪೂರ್ಣಗೊಂಡ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಹಾಗೂ ಇತರೆ ವಿಶ್ವವಿದ್ಯಾನಿಲದಲ್ಲಿ ಮತ್ತು ವಿವಿದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಹುದ್ದೆಯನ್ನು ಪಡೆದುಕೊಂಡಿರುತ್ತಾರೆ, ಮತ್ತೆ ಕೆಲವರು ಸಮಾಜದ ವಿವಿದ ಕ್ಷೇತ್ರಗಳಲ್ಲಿ ಸೇವೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

 

      2012ರಲ್ಲಿ ವಿಭಾಗವು ಮೈಸೂರು ವಿಶ್ವವಿಧ್ಯಾನಿಲಯದ ಅಂಗ ಸಂಸ್ಥೆಯಾಗಿ ಸ್ಥಾಪನೆಗೊಂಡಿರುತ್ತದೆ. 2012ರಿಂದ 2017ರವರೆಗೆ. ಪ್ರೋ. ಎಸ್. ಎಲ್. ಬೆಳಗಲಿ ಮತ್ತು ಡಾ. ಎ. ಜಿ. ದೇವಿಪ್ರಸಾದ್‍ರವರು ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ ಪ್ರಸ್ತುತ ಡಾ ಎನ್. ಎಸ್. ರಾಜುರವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದಾರೆ. 

 

      ವಿಭಾಗಕ್ಕೆ ಇಲ್ಲಿಯವರೆಗೆ ವಿವಿದ ಸಂಸ್ಥಗಳಿಂದ (DBT, DST, UGC, MOEF, etc.) ಸುಮಾರು 03 ಕೋಟಿ ರೂಪಾಯಿಗಳಷ್ಷು ಯೋಜನೆಯ ಅನುದಾನವನ್ನು ನೀಡಿರುತ್ತಾರೆ. 

 

ವಿಭಾಗದಿಂದ ಇಲ್ಲಿಯವರೆಗೆ 04 ಅಂತರಾಷ್ಟ್ರೀಯ, 10 ರಾಷ್ಟ್ರೀಯ ಸಮ್ಮೇಳನ ಮತ್ತು 10ರಿಂದ15 ಕಾರ್ಯಗಾರಗಳನ್ನು ನಡೆಸಲಾಗಿದೆ, ವಿಭಾಗದಲ್ಲಿ ಅತ್ಯಾದುನಿಕವಾದ 02 ಉಪನ್ಯಾಸ ಕೊಠಡಿಗಳು, 02 ಪ್ರಯೋಗಶಾಲೆ ಹಾಗೂ 05 ಸಂಶೋಧನೆ ಪ್ರಯೋಗಶಾಲೆಗಳಿದ್ದು ವಿಧ್ಯಾರ್ಥಿಗಳಿಗೆ ಸಂಶೋಧನೆ ಮತ್ತು ವಿಧ್ಯಾಭ್ಯಾಸ ಮಾಡುವುದಕ್ಕೆ ಎಲ್ಲಾ ರೀತಿಯಲ್ಲಿ ಅನುಕೂಲಕರವಾಗಿದೆ.