ಕಾನೂನು ಅಧ್ಯಯನ ವಿಭಾಗ

ಕಾನೂನು ಅಧ್ಯಯನ ವಿಭಾಗದ ಬಗ್ಗೆ

 

ಕಾನೂನು ಅಧ್ಯಯನ ವಿಭಾಗವು 1973ರಲ್ಲಿ ಕಾರ್ಯಾರಂಭಗೊಂಡಿತು. ಉನ್ನತ ಕಾನೂನು ಶಿಕ್ಷಣ ಮತ್ತು ಸಂಶೋಧನಾ ಅಧ್ಯಯನಗಳನ್ನು ಒದಗಿಸುವಲ್ಲಿ ಇದು ದಕ್ಷಿಣ ಭಾರತದ ಮುಂಚೂಣಿಯಲ್ಲಿದೆ.  ವಿಭಾಗವು ಎಲ್.ಎಲ್.ಎಂ(4 ಸೆಮಿಸ್ಟರ್)ವುಳ್ಳ  ಸ್ನಾತಕೋತ್ತರ ಕೋರ್ಸ್ ನಡೆಸುತ್ತಿದ್ದು Constitutional Law, International Law and Business and Trade Law ಎಂಬ ಕೋರ್ಸ್‍ಗಳ ಆಯ್ಕೆಯೊಂದಿಗೆ. LL.M. ಮೈಸೂರುನಲ್ಲಿನ ಅಧ್ಯಯನವು ಕಾನೂನು ಸಂಶೋಧನೆಗಳಲ್ಲಿ ಹೆಚ್ಚಿನ ಮಟ್ಟದ ತರಬೇತಿಗೆ ಹೆಸರುವಾಸಿಯಾಗಿದೆ, ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಪ್ರಬಂಧ/ಪ್ರಕಾಶನಗಳನ್ನು ಪ್ರಕಟಿಸುತ್ತಾರೆ ಹಾಗೂ ಹಲವಾರು ಈ ಪ್ರಬಂಧ/ಪ್ರಕಾಶನಗಳು ಸಹಾ ಪ್ರಕಟಣೆಗೊಂಡಿವೆ.

 

ಈ ಕಾನೂನು ವಿಭಾಗವು ಉತೃಷ್ಟ ದರ್ಜೆಯ ಭೋಧನೆಗೆ ಪ್ರಸಿದ್ಧಿಯಾಗಿದೆ ಆದ್ದರಿಂದ ಕಿನ್ಯಾ, ಟಾನ್‍ಜೇನಿಯಾ, ಟಿಬೆಟ್ ಮುಂತಾದ ದೇಶಗಳಿಂದ ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. ಈ ವಿಭಾಗವು ಉತ್ತಮವಾದ ಗ್ರಂಥಾಲಯ ಮತ್ತು ಕಂಪ್ಯೂಟರ್ ಪ್ರಯೋಗಾಲಯವನ್ನು ಹೊಂದಿದೆ.