ವಾಣಿಜ್ಯ

1660-61ರ ಶೈಕ್ಷಣಿಕ ವರ್ಷದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಅಧ್ಯಯನಗಳ ವಿಭಾಗಗಳನ್ನು ಸ್ಥಾಪಿಸಲಾಯಿತು. ಆದಾಗ್ಯೂ, ದಶಕಗಳ ಹಿಂದೆ ವಾಣಿಜ್ಯ ಶಿಕ್ಷಣವನ್ನು ಪದವಿ ಮಟ್ಟದಲ್ಲಿ ನೀಡಲಾಗುತ್ತಿತ್ತು. 1916ರಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದಾಗ ವಾಣಿಜ್ಯ ವಿಷಯವು ಹಲವಾರು ವರ್ಷಗಳಿಂದ ಪದವಿ ಮಟ್ಟದಲ್ಲಿ ಅಧ್ಯಯನಗಳ ಒಂದು ಭಾಗವಾಗಿ ನೀಡಲ್ಪತ್ತಿತ್ತು ಮತ್ತು ಎಂಜಿನಿಯರಿಂಗ್‍ನಂತಹ ಇತರ ವೃತ್ತಿಪರ ಕೋರ್ಸುಗಳ ಪರಿಚಯದಿಂದಾಗಿ ಹಿಂತೆಗೆದುಕೊಳ್ಳಲ್ಪಟ್ಟಿದೆ.

 

ಬೆಂಗಳೂರಿನ ರಾಮನಾರಯಣ ಚೆಲ್ಲರಾಮ್ ಕಾಲೇಜ್ 1940ರ ದಶಕದಲ್ಲಿ ವಾಣಿಜ್ಯ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, 1950ರ ದಶಕದಲ್ಲಿ ಮೈಸೂರಿನ ಡಿ.ಬನುಮಯ್ಯ ಕಾಲೇಜ್ ಆಫ್ ಕಾಮರ್ಸ್ ಸ್ಥಾಪನೆಯಾಯಿತು. 1960 ಮತ್ತು 70ರ ದಶಕದಲ್ಲಿ ವಾಣಿಜ್ಯ ಶಿಕ್ಷಣವನ್ನು ಇತರ ಹಲವಾರು ವಾಣಿಜ್ಯ ಕಾಲೇಜುಗಳ ಪ್ರಾರಂಭದೊಂದಿಗೆ ಹಾಗೂ ಸೈನ್ಸ್ ಮತ್ತು ಆಟ್ಸ್ ಕಾಲೇಜುಗಳಲ್ಲಿ ವಾಣಿಜ್ಯ ವಿಷಯಗಳನ್ನು ಒಂದು ಭಾಗವಾಗಿ ಭೋದಿಸಲ್ಪಡುತ್ತಿದೆ.