ಅಧ್ಯಾಪಕರುಗಳ ಮಾಹಿತಿ

ಪ್ರೊ. ಜೆ. ಸೋಮಶೇಖರ್, ಪ್ರಾಧ್ಯಾಪಕರು ಹಾಗೂ ಕೇಂದ್ರದ ನಿರ್ದೇಶಕರು

ಪ್ರೊ. ಜೆ. ಸೋಮಶೇಖರ್ ಇವರು 2003ರ ಅಕ್ಟೋಬರ್ 20ರಿಂದ 2013ರ ಜನವರಿ 9 ರವರೆಗೆ ಸಹಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಹಾಗೂ ಕೇಂದ್ರದ ನಿರ್ದೇಶಕರಾಗಿ ದೀರ್ಘಕಾಲ ಸೇವೆ ಸಲ್ಲಿಸುವ ಮೂಲಕ ಕೇಂದ್ರವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಕಾರಣರಾಗಿರುತ್ತಾರೆ.  ಪ್ರಸ್ತುತ ಇವರು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಡಾ. ಎಸ್. ನರೇಂದ್ರಕುಮಾರ್, ಸಹಾಯಕ ಪ್ರಾಧ್ಯಾಪಕರು
 

ಡಾ. ಎಸ್. ನರೇಂದ್ರಕುಮಾರ್, ಎಂ.ಎ., ಪಿಎಚ್.ಡಿ, ಇವರು 2003ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ 2013ನೇ ಫೆಬ್ರವರಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಂಯೋಜನಾಧಿಕಾರಿಯಾಗಿ ಜೊತೆಗೆ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 
ಹಿಂದಿನ ಡಾ. ಬಿ. ಆರ್. ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕರುಗಳು: 
 
ಅಂತರರಾಷ್ಟ್ರೀಯ ಪ್ರಖ್ಯಾತ ರಾಜಕೀಯ ಚಿಂತಕರೂ, ಬರಹಗಾರರೂ ಹಾಲಿ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಆಗಿರುವ    ಪ್ರೊ. ಗೋಪಾಲಗುರು ಇವರು 1995ರಿಂದ 1996ರವರೆಗೆ ಸೇವೆ ಸಲ್ಲಿಸಿರುತ್ತಾರೆ.
 
ಅಂತರರಾಷ್ಟ್ರೀಯ ಪ್ರಖ್ಯಾತಿಯ ಚಿತ್ರ ಕಲಾವಿದರು, ದಲಿತ ಹಾಗೂ ರೈತ ಚಳವಳಿಯ ಪ್ರಮುಖ ಹಿರಿಯ ಹೋರಾಟಗಾರರು ಆದ ಶ್ರೀ ಕೆ. ಟಿ. ಶಿವಪ್ರಸಾದ್ ಇವರು ಜೂನ್ 2008 ರಿಂದ ನವೆಂಬರ್ 2008ರವರೆಗೆ, ಮತ್ತು ಆಗಸ್ಟ್ 2009 ರಿಂದ ಫೆಬ್ರವರಿ 2010ರವರೆಗೆ ಸೇವೆ ಸಲ್ಲಿಸಿರುತ್ತಾರೆ.
 
ನಾಡಿನ ಪ್ರಸಿದ್ಧ ಸಾಹಿತಿಗಳು, ವಿಶ್ರಾಂತ ಪ್ರಾಧ್ಯಾಪಕರೂ ಆದ ಪ್ರೊ. ಮ. ನ. ಜವರಯ್ಯ ಇವರು ಸೆಪ್ಟೆಂಬರ್ 2011 ರಿಂದ ಆಗಸ್ಟ್ 2012ರವರೆಗೆ ಕಾರ್ಯವನ್ನು ನಿರ್ವಹಿಸಿರುತ್ತಾರೆ. 
 
ಬೌದ್ಧ ಉಪಾಸಕರೂ, ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಸ್ಫೂರ್ತಿಧಾಮದ ರೂವಾರಿಗಳೂ, ನಿವೃತ್ತ ಪೋಲಿಸ್ ವರಿಷ್ಠಾಧಿಕಾರಿಗಳೂ ಆದ ಶ್ರೀ ಎಸ್. ಮರಿಸ್ವಾಮಿ ಅವರು ಸೆಪ್ಟೆಂಬರ್ 2012 ರಿಂದ ಆಗಸ್ಟ್ 2013 ರವರೆಗೆ ಕಾರ್ಯವನ್ನು ನಿರ್ವಹಿಸಿರುತ್ತಾರೆ.
 
ನಾಡಿನ ಹೆಸರಾಂತ ಪ್ರಗತಿಪರ ಚಿಂತಕರು ಸಾಹಿತಿಗಳೂ ಆದ ಪ್ರೊ. ಕಾಳೇಗೌಡ ನಾಗವಾರ ಇವರು ನವೆಂಬರ್ 2013 ರಿಂದ ಡಿಸೆಂಬರ್ 31, 2015ರವರೆಗೆ ಕಾರ್ಯವನ್ನು ನಿರ್ವಹಿಸುತ್ತಾರೆ.
 
ನಾಡಿನ ಹೆಸರಾಂತ ಕವಿಗಳು ಹಾಗೂ ಸಾಹಿತಿಗಳೂ ಆದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರು ಏಪ್ರಿಲ್ 21, 2016 ರಿಂದ ಏಪ್ರಿಲ್ 20, 2017ರವರೆಗೆ ಕಾರ್ಯವನ್ನು ನಿರ್ವಹಿಸಿರುತ್ತಾರೆ.