ಪ್ರಶಸ್ತಿ / ಮಾನ್ಯತೆ / ಸಾಧನೆ

ಅಧ್ಯಾಪಕರುಗಳು, ವಿಭಾಗ ಪಡೆದ ಪ್ರಶಸ್ತಿ / ಮಾನ್ಯತೆ / ಸಾಧನೆ


ಅಧ್ಯಾಪಕರ ಸಾಧನೆ: ಡಾ. ಎಸ್. ನರೇಂದ್ರಕುಮಾರ್, ಸಂಯೋಜನಾಧಿಕಾರಿ
1. ಇವರ ‘ಬೋಧಿನೆಲದ ಮಾತು’ ಕೃತಿಗೆ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ (ರಿ) ಗದಗ ಇವರಿಂದ 2009ನೇ ಸಾಲಿನ ದಲಿತ ಸಾಹಿತ್ಯ ಸಂಕೀರ್ಣ ಪ್ರಕಾರದಲ್ಲಿ ಪುಸ್ತಕ ಪ್ರಶಸ್ತಿ ಲಭಿಸಿದೆ ಹಾಗೂ 2013 ಮಾರ್ಚ್ 16-17ರಂದು ನಡೆದ ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸೇವೆಯನ್ನು ಗುರುತಿಸಿ ಇವರನ್ನು ಅಭಿನಂದಿಸಲಾಗಿರುತ್ತದೆ.


2. ಇವರ “ಮಹಾಮಾನವತಾವಾದಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್” ಪುಸ್ತಕವನ್ನು ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ 125ನೇ ವರ್ಷದ ಅಂಗವಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 7 ಲಕ್ಷ ಪ್ರತಿಗಳನ್ನು ಮುದ್ರಿಸಿ ರಾಜ್ಯಾದ್ಯಂತ ಜನರಿಗೆ ಉಚಿತವಾಗಿ ಜನರಿಗೆ ವಿತರಿಸಲಾಗಿರುತ್ತದೆ.


3. ಇವರ “ಸಮಾನತೆಯ ಕನಸುಗಾರ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್” ಪುಸ್ತಕವನ್ನು ಅಂಬೇಡ್ಕರ್ ಅವರ 127ನೇ ವರ್ಷದ ಜಯಂತಿ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿಶೇಷ ಘಟಕದ ವತಿಯಿಂದ 3000 ಪ್ರತಿಗಳನ್ನು ಮುದ್ರಿಸಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾಮಾನ್ಯ ಜನತೆಗೆ ಉಚಿತವಾಗಿ ವಿತರಿಸಲಾಗಿರುತ್ತದೆ.

 

ಕೇಂದ್ರದ ಸಾಧನೆ: (ಸ್ಥಾಪನೆ 2000)
1. ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಆಂಗ್ಲೋ-ಇಂಡಿಯನ್ ಸಂಸತ್ ಸದಸ್ಯರಾದ ಶ್ರೀಮತಿ ಬ್ಯಾಟ್ರಿಕ್ ಡಿ.ಸೌಜû, ಚೆನ್ನೈ ಇವರ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯ ರೂ. 30 ಲಕ್ಷಗಳ ಅನುದಾನದ ವತಿಯಿಂದ ಸ್ವಂತ ಕಟ್ಟಡವನ್ನು ನಿರ್ಮಾಣಗೊಂಡಿದೆ.


2. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಎಂ.ಎ. ಅಂಬೇಡ್ಕರ್ ಅಧ್ಯಯನವನ್ನು 2018-19ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸಲಾಗಿದೆ.


3. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಎಂ.ಫಿಲ್ ಅಂಬೇಡ್ಕರ್ ಅಧ್ಯಯನವನ್ನು 2009-10ನೇ ಸಾಲಿನಿಂದ ಪ್ರಾರಂಭಿಸಲಾಗಿತ್ತು.


4. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸಮಾನತೆಗಾಗಿ ದಲಿತ ಯುವಜನತೆ ಸಮಾವೇಶವನ್ನು ನವೆಂಬರ್ 26, 2006ರಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಧಮ್ಮ ದೀಕ್ಷಾ ಸುವರ್ಣ ಮಹೋತ್ಸವ ಆಚರಣೆ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.


5. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಮೈಸೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿಶೇಷ ಘಟಕದ ಸಹಯೋಗದೊಂದಿಗೆ ಪ್ರತಿವರ್ಷ ಏಪ್ರಿಲ್ 14ರಂದು ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದ ಪಿಎಚ್.ಡಿ. ಪದವೀಧರರನ್ನು ಸನ್ಮಾನಿಸಲಾಗುತ್ತಿದೆ.


6. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಶಾಲಾ ಮಕ್ಕಳನ್ನು ಅಂಬೇಡ್ಕರ್ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಆಹ್ವಾನಿಸಲಾಗುತ್ತಿದೆ.


7. “ಸಮತಾ ಶಿಲ್ಪ ಉದ್ಯಾನ” – 2014 (ಭಾರತದ ಸಮಾನತೆಯ ಹೋರಾಟದ ಚರಿತೆಯ ಕಥನವನ್ನು ಸಾರುವ ಒಟ್ಟು 12 ಶಿಲ್ಪಿಗಳು ಕೇಂದ್ರದ ಹೊರ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿವೆ) ಇದರ ಪರಿಕಲ್ಪನೆ: ಡಾ. ಎಸ್. ನರೇಂದ್ರಕುಮಾರ್, ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜನಾಧಿಕಾರಿ, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಶಿವಪ್ರಸಾದ್, ರಾಮನಗರ, ಸದಸ್ಯರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು. ಶಿಲ್ಪಿಗಳೊಂದಿಗೆ ಚರ್ಚಿಸಿದವರು: ದೇವನೂರ ಮಹಾದೇವ, ಕೆ. ಟಿ. ಶಿವಪ್ರಸಾದ್. ಎಚ್. ಗೋವಿಂದಯ್ಯ, ಪಿಚ್ಛಳ್ಳಿ ಶ್ರೀನಿವಾಸ್, ಕೋಟಿಗಾನಹಳ್ಳಿ ರಾಮಯ್ಯ, ಎಚ್. ಜನಾರ್ಧನ್ (ಜನ್ನಿ), ಶಿಲ್ಪಗಳ ಸ್ಥಾಪನೆಗೆ ನೆರವು: ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಸರ್ಕಾರ


8. “ಸ್ಪರ್ಶ” ಚಿತ್ರಕಲೆಗಳು – 2015 (ಅಂಬೇಡ್ಕರ್ ಚಿಂತನೆ ಹಾಗೂ ಬೌದ್ಧತತ್ತ್ವಗಳನ್ನು ಆಧರಿಸಿದ ಒಟ್ಟು 35 ಚಿತ್ರಕಲೆಗಳನ್ನು ಕೇಂದ್ರದ ಒಳಾಂಗಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ) ಇದರ ಪರಿಕಲ್ಪನೆ: ಡಾ. ಎಸ್. ನರೇಂದ್ರಕುಮಾರ್, ಸಹಾಯಕ ಪ್ರಾಧ್ಯಾಪಕರು, ಪೆÇ್ರ. ಕಾಳೇಗೌಡ ನಾಗವಾರ, ಪ್ರಗತಿಪರ ಚಿಂತಕರು ಹಾಗೂ ಸಂದರ್ಶಕ ಪ್ರಾಧ್ಯಾಪಕರು, ಡಾ. ಬಿ. ಆರ್. ಅಂಬೇಡ್ಕರ್ ಪೀಠ, ಮೈಸೂರು ವಿಶ್ವವಿದ್ಯಾನಿಲಯ, ಡಾ. ಎಂ. ಎಸ್. ಮೂರ್ತಿ, ಚಿತ್ರಕಲಾವಿದರು ಹಾಗೂ ಅಧ್ಯಕ್ಷರು, ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು. ನೆರವು: ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಚಿತ್ರಕಲಾ ಅಕಾಡೆಮಿ, ಬೆಂಗಳೂರು


9. ಕೇಂದ್ರದ ಸಾಧನೆಗಳನ್ನು ಕುರಿತು ದೂರದರ್ಶನ ಚಂದನ ಡಿ.ಡಿ.1ರಲ್ಲಿ ಒಂದು ಗಂಟೆಗಳ ವಿಶೇಷ ಕಾರ್ಯಕ್ರಮವನ್ನು ಡಿಸೆಂಬರ್ 6, 2015ರಲ್ಲಿ ಪ್ರಸಾರ ಮಾಡಲಾಗಿರುತ್ತದೆ.


10. ಕೇಂದ್ರದ ಪ್ರಕಟಣೆಗಳು:
ಅಭಿಮುಖಿ (2005), ಸಂಪಾದಕರುಗಳು: ಡಾ. ಜೆ. ಸೋಮಶೇಖರ್ ಮತ್ತು ಡಾ. ಎಸ್. ನರೇಂದ್ರಕುಮಾರ್
ಮರಳಿ ಮನೆಗೆ (2006), ಪ್ರಧಾನ ಸಂಪಾದಕರು: ಡಾ. ಮೂಡ್ನಾಕೂಡು ಚಿನ್ನಾಸ್ವಾಮಿ, ಸಂಪಾದಕರು: ದೇವನೂರ ಮಹಾದೇವ, ಪೆÇ್ರ.ಎಚ್.ಗೋವಿಂದಯ್ಯ,
ಪೆÇ್ರ. ಅರವಿಂದ ಮಾಲಗತ್ತಿ, ಡಾ. ಎಸ್. ತುಕಾರಾಮ್
ಬಹುಶ್ರುತತೆ (2010), ಸಂಪಾದಕರುಗಳು: ಡಾ. ಜೆ. ಸೋಮಶೇಖರ್ ಮತ್ತು ಡಾ. ಎಸ್. ನರೇಂದ್ರಕುಮಾರ್


11. ಕೇಂದ್ರದ ಗ್ರಂಥಾಲಯ: ಸಂಶೋಧಕರು, ವಿದ್ಯಾರ್ಥಿಗಳು, ಅಧ್ಯಾಪಕರು, ಜನಸಾಮಾನ್ಯರು ಹಾಗೂ ಸಾಮಾಜಿಕ ಚಳವಳಿಗಳ ಕಾರ್ಯಕರ್ತರ ಅಧ್ಯಯನಕ್ಕೆ ಅನುಕೂಲವಾಗುವ ದೃಷ್ಠಿಯಿಂದ ಕೇಂದ್ರವು ಕಿರು ಗ್ರಂಥಾಲಯವನ್ನು ಹೊಂದಿದೆ. ಕೇಂದ್ರದಲ್ಲಿ ಅಂಬೇಡ್ಕರ್ ಅವರ ಪ್ರಮುಖ ಕೃತಿಗಳ ಸಂಗ್ರಹವಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿರುವ ಅಂಬೇಡ್ಕರ್ ಅವರ ಬರಹ ಹಾಗೂ ಭಾಷಣಗಳ ಕನ್ನಡ ಹಾಗೂ ಇಂಗ್ಲೀಷ್ ಸಂಪುಟಗಳು, ಸಂವಿಧಾನ ರಚನಾ ಸಭೆಯ ಚರ್ಚೆಯ ಸಂಪುಟಗಳು, ದಲಿತ ಸಾಹಿತ್ಯ, ದಲಿತ ಸಂಸ್ಕೃತಿ, ಭಾರತೀಯ ರಾಜಕಾರಣ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಹಿಂದುಳಿದ ವರ್ಗ – ಮಹಿಳೆ – ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಚಳವಳಿಯನ್ನು ಕುರಿತ ಮಾಹಿತಿಗಳನ್ನು ಒಳಗೊಂಡ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಒಟ್ಟು 6500 ಮಹತ್ವದ ಗ್ರಂಥಗಳನ್ನು ಕೇಂದ್ರವು ಹೊಂದಿದೆ. ಜೊತೆಗೆ ಕೆಲವು ಜಿಲ್ಲೆಯ ಗೆಜೆಟಿಯರ್‍ಗಳು, ವರದಿಗಳು, ಕೇಂದ್ರದ ವಿಚಾರ ಸಂಕಿರಣಗಳಿಗೆ ಸಂಬಂಧಿಸಿದ ಸಿ.ಡಿ.ಗಳು, ಡಿ.ವಿ.ಡಿ.ಗಳನ್ನು ಹೊಂದಿದೆ. ಅಂಬೇಡ್ಕರರ ಪತ್ರಗಳು, ದಲಿತ ಸಂಘರ್ಷ ಸಮಿತಿ ಪ್ರಕಟಿಸಿದ ‘ಪಂಚಮ’ ಪತ್ರಿಕೆಗಳು, ಇನ್ನೂ ಅತ್ಯುಪಯುಕ್ತ ಗ್ರಂಥಗಳು ಪತ್ರಿಕೆಗಳು ಇವೆ. ಜೊತೆಗೆ ಪಿಎಚ್.ಡಿ. ಹಾಗೂ ಎಂ.ಫಿಲ್ ಪದವಿಗಾಗಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲಾದ ಕೇಂದ್ರದ ಸಂಶೋಧಕರ ಪ್ರೌಢಪ್ರಬಂಧಗಳನ್ನು ಇಡಲಾಗಿದೆ. ವಿವಿಧ ಅನುದಾನಗಳ ಮೂಲಕ ಕೇಂದ್ರದ ವತಿಯಿಂದ ಕೈಗೊಂಡ ಕಾರ್ಯಯೋಜನೆಗಳ (Pಡಿoರಿeಛಿಣ) ವರದಿಗಳು ಕೂಡ ಗ್ರಂಥಾಲಯದಲ್ಲಿವೆ.

 

12. ಅಂಬೇಡ್ಕರ್ ಸಭಾಂಗಣ: ಕೇಂದ್ರವು ತನ್ನದೇಯಾದ ಸುಸಜ್ಜಿತ ಸಭಾಂಗಣವನ್ನು ಹೊಂದಿದೆ. ಅಂಬೇಡ್ಕರ್ ಸಭಾಂಗಣದ ನಿರ್ಮಾಣಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯವು 50 ಲಕ್ಷ ರೂಪಾಯಿಗಳನ್ನು ನೀಡಿದೆ. ಮಾಜಿ ಸಚಿವರೂ ಹಾಲಿ ಮೈಸೂರು ಕ್ಷೇತ್ರದ ಸಂಸತ್ ಸದಸ್ಯರೂ ಆದ ಸನ್ಮಾನ್ಯ ಶ್ರೀ ಎಚ್. ವಿಶ್ವನಾಥ್ ಅವರು ತಮ್ಮ ಸಂಸತ್ ಸದಸ್ಯರ ನಿಧಿಯಿಂದ 25 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ.ಎಚ್.ವಿಜಯಶಂಕರ್ ಅವರು ತಮ್ಮ ನಿಧಿಯಿಂದ ರೂ. 16.50ಲಕ್ಷಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಸನಗಳನ್ನು ಒದಗಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸಭಾಂಗಣದ ಆಕೊಸ್ಟಿಕ್ ಕೆಲಸ ಹಾಗೂ ಹವಾನಿಯಂತ್ರಣ ಅಳವಡಿಕೆಯಾಗಿದೆ. ಪ್ರಸ್ತುತ ಅಂಬೇಡ್ಕರ್ ಸಭಾಂಗಣವನ್ನು ನಿರ್ಮಿಸಲಾಗಿತ್ತು ಉದ್ಘಾಟನಾ ಹಂತದಲ್ಲಿದೆ.