ಕುಲಾಧಿಪತಿಗಳು


ಶ್ರೀ. ವಜುಭಾಯಿ ವಾಲಾ,
 ಸನ್ಮಾನ್ಯ ರಾಜ್ಯಪಾಲರು, ಕರ್ನಾಟಕ ಮತ್ತು ಕುಲಾಧಿಪತಿಗಳು, ಮೈಸೂರು ವಿಶ್ವವಿದ್ಯಾನಿಲಯ

ಶ್ರೀ. ವಜುಭಾಯಿ ವಾಲಾ, ಸನ್ಮಾನ್ಯ ರಾಜ್ಯಪಾಲರು, ಕರ್ನಾಟಕ ಮತ್ತು ಕುಲಾಧಿಪತಿಗಳು, ಮೈಸೂರು ವಿಶ್ವವಿದ್ಯಾನಿಲಯ

ಶ್ರೀ. ವಜುಭಾಯಿ ವಾಲಾ ಅವರು ಹುಟ್ಟು ನೇತಾರರು. ಅವರು ತಮ್ಮ ಶಾಲಾ ದಿನಗಳಲ್ಲಿಯೇ ಆರ್.ಎಸ್.ಎಸ್.ನ ಸ್ವಯಂ ಸೇವಕರಾಗಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಸಹಪಾಠಿಗಳ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಶಾಲಾ ದಿನಗಳಲ್ಲಿ ತಮ್ಮ ಮುಂದಾಳತ್ವದ ಗುಣಗಳನ್ನು ಪ್ರದರ್ಶಿಸಿದರು. ಈ ರೀತಿ ಬಾಲ್ಯದಿಂದಲೇ ಅವರೊಬ್ಬ ನಾಯಕರಾಗಿ ಹೊರಹೊಮ್ಮಿದರು. ತಮ್ಮ ಕಾಲೇಜು ದಿನಗಳಲ್ಲಿ ಅವರು ಜಿಮ್ಖಾನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಶ್ರೀ. ವಜುಭಾಯಿ ವಾಲಾ ಅವರು ಒಬ್ಬ ನಾಯಕರಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ಅವರಿಗೆ ಸಮಾಜದ ದೀನ ದಲಿತ ಹಾಗೂ ನಿರ್ಗತಿಕರ ಕಡೆಗೆ ಸಹಾನುಭೂತಿ ಹಾಗೂ ಕರುಣೆ ಇದೆ. ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ ಹಾಗೂ ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಾರೆ.  ಅವರು ತಮ್ಮ ಉದಾರ, ವಿನಮ್ರ, ವಾತ್ಸಲ್ಯಭರಿತ  ಹಾಗೂ ಸೌಜನ್ಯಪೂರ್ಣ ವರ್ತನೆಯಿಂದ ಜನರ ಮನದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿದ್ದಾರೆ.

ಶ್ರೀ. ವಜುಭಾಯಿ ವಾಲಾ ಅವರಲ್ಲಿರುವ ಸಂಯಮ ಗುಣದಿಂದಾಗಿ ಅವರು ಕೋಪದ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿದ್ದಾರೆ. ಆದುದರಿಂದ ಅವರನ್ನು ಸಂಯಮ ಮತ್ತು ಕರುಣೆಯ ಮೂರ್ತಿಯೆಂದು ಕರೆಯಬಹುದು. ಈ ಗುಣಗಳೊಂದಿಗೆ ಅವರು ಸದಾ ಸೇವೆಯಲ್ಲಿ ತೊಡಗಿರುತ್ತಾರೆ. ಅವರ ಸರಳ ಮತ್ತು ಸ್ನೇಹಪರ ಸ್ವಭಾವದಿಂದಾಗಿ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ.

ಶ್ರೀ. ವಜುಭಾಯಿ ವಾಲಾ ಅವರು ಸಾರ್ವಜನಿಕ ನಾಯಕರಾಗಿ 1971 ರಿಂದ ಭಾರತದ ಒಂದು ಪ್ರಮುಖ ಸಹಕಾರಿ ಬ್ಯಾಂಕ್- ರಾಜ್ ಕೋಟ್ ನಾಗರಿಕ ಸಹಕಾರಿ ಬ್ಯಾಂಕ್‍ನ ಸಾಂಗತ್ಯದಲ್ಲಿದ್ದಾರೆ. ಅವರು 1975-76, 1981-82 ಮತ್ತು 1987 ರಿಂದ 1990ರ ಅವಧಿಯಲ್ಲಿ ಈ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ಅವರಿಗೆ ಸಹಕಾರಿ ಕಾನೂನುಗಳ ಬಗ್ಗೆ ಇದ್ದ ಅಗಾಧ ಜ್ಞಾನದ ಮೂಲಕ ಬ್ಯಾಂಕಿನ ಸೇವೆಯ ಯೋಜನೆ, ಸಂಘಟನೆ ಹಾಗೂ ಅಭಿವೃದ್ಧಿಯನ್ನು ಮಾಡಿದರು. ಇದರಿಂದಾಗಿ ಅವರು ಬ್ಯಾಂಕಿನ ಎಲ್ಲಾ ಸದಸ್ಯರು ಹಾಗೂ ಗ್ರಾಹಕರ ನಡುವೆ ಜನಪ್ರಿಯರಾದರು. ಇನ್ನೂ ಹೆಚ್ಚು ಓದಲು ...