ಕುಲಪತಿಗಳು

ಪ್ರೊ. ಜಿ. ಹೇಮಂತ ಕುಮಾರ್,
ಮಾನ್ಯ ಕುಲಪತಿಗಳು
ದೂರವಾಣಿ : 0821 – 2419666
ಈ ಮೇಲ್ : vc@uni-mysore.ac.in

ಪ್ರೊ. ಜಿ. ಹೇಮಂತ ಕುಮಾರ್ ರವರು ಮೇ 21, 1959 ರಂದು ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಅವರು ಬಿ.ಎಸ್‍ಸಿ., ಬಿ.ಎಡ್., ಎಂಎಸ್ಸಿ., ಪಿಎಚ್.ಡಿ. ಪದವಿಯನ್ನು ಗಳಿಸಿದ್ದಾರೆ. ಪ್ರೊ.ಜಿ.ಹೇಮಂತ ಕುಮಾರ್ ರವರು ಸುಮಾರು 448 ಕ್ಕೂ ಹೆಚ್ಚು ಸಂಶೋಧನಾ ಪತ್ರಿಕೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪೀರ್ ನಿಯತಕಾಲಿಕೆಗಳನ್ನು ವಿಮರ್ಶಿಸಿ ಪ್ರಕಟಿಸಿದ್ದಾರೆ ಮತ್ತು ಸುಮಾರು 150ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಶ್ರೀಯುತರು ಸುಮಾರು 1446ಕ್ಕೂ ಹೆಚ್ಚು ವೈಜ್ಞಾನಿಕ ಉಲ್ಲೇಖಗಳನ್ನು ಹಾಗೂ ಹೆಚ್-ಇಂಡೆಕ್ಸ್ 24ನ್ನು ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರೊ.ಹೇಮಂತ ಕುಮಾರ್ ರವರು ಆಹ್ವಾನಿತ ಮತ್ತು ಸಮಗ್ರ ಉಪನ್ಯಾಸಗಳನ್ನು ರಾಷ್ಟ್ರೀಯ/ಅಂತಾರಾಷ್ಟ್ರೀಯ ಸಭೆ ಮತ್ತು ಸಮ್ಮೇಳನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೀಡಿದ್ದಾರೆ. ಪ್ರೊ. ಜಿ.ಹೇಮಂತ ಕುಮಾರ್ ರವರು ಮಾರ್ಗದರ್ಶನದಲ್ಲಿ ಈಗಾಗಲೇ 20ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಪಡೆದಿದ್ದು, ಪ್ರಸ್ತುತ 08 ವಿದ್ಯಾರ್ಥಿಗಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ. DST, AICTE, UGC ಮತ್ತು DIETY ಮುಂತಾದ ಪ್ರಮುಖ ಸಂಶೋಧನಾ ಸಂಸ್ಥೆಗಳಿಂದ ಪ್ರೊ. ಜಿ. ಹೇಮಂತ ರವರು ಸಂಶೋಧನಾ ಯೋಜನೆಗಳನ್ನು ಪಡೆದಿರುತ್ತಾರೆ. ರೂ.ಐದು ಕೋಟಿಗಿಂತ ಹೆಚ್ಚು ಹಣವನ್ನು ಅಂತಾರಾಷ್ಟ್ರೀಯ ಸಹಭಾಗಿತ್ವದ ಸಂಶೋಧನಾ ಯೋಜನೆಗಳಿಂದ ಪಡೆದಿರುತ್ತಾರೆ. ಇವರು ವೈಜ್ಞಾನಿಕ ಸಂಘ-ಸಂಸ್ಥೆಗಳ ಸದಸ್ಯರಾಗಿದ್ದು ಅವುಗಳಲ್ಲಿ ಪ್ರಮುಖವಾದವು : ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ (ISTE), ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ (CSI), ಭಾರತೀಯ ವಿಜ್ಞಾನ ಕಾಂಗ್ರೆಸ್ ಮತ್ತು IAPR –ಗಳಲ್ಲಿ ಆಜೀವ ಸದಸ್ಯರಾಗಿದ್ದಾರೆ . 

ಪ್ರೊ. ಜಿ. ಹೇಮಂತ ಕುಮಾರ್ ಅವರು ಹಲವಾರು ಕಾರ್ಯಾಗಾರಗಳನ್ನು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿರುತ್ತಾರೆ. ಶ್ರೀಯುತರ ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸಿ  ಅವರಿಗೆ  ಮಿಲೇನಿಯಮ್  ಪ್ಲೇಕ್ಸ್  ಹಾನರ್  (Millennium   Plaques   Honor) ಪ್ರಶಸ್ತಿಯನ್ನು  (ವಿಜ್ಞಾನ  ಮತ್ತು  ತಂತ್ರಜ್ಞಾನದಲ್ಲಿ  ಸೇವೆ  ಸಲ್ಲಿಸಿದ  ಗಣ್ಯರಿಗೆ  ನೀಡುವಂತಹ ಪ್ರಧಾನಮಂತ್ರಿಗಳ  ಪ್ರಶಸ್ತಿ)  2018ರಲ್ಲಿ  ನಡೆದ  ಭಾರತೀಯ  ವಿಜ್ಞಾನ  ಕಾಂಗ್ರೆಸ್  ಅಧಿವೇಶನದಲ್ಲಿ ಪ್ರದಾನಿಸಲಾಗಿದೆ. ಶ್ರೀಯುತರು ಉಪಾಧ್ಯಾಯ ಮೂಡುಬಿಲ್ಲೆ ಆರ್ಟ್ ಫೌಂಡೇಷನ್, ಉಡುಪಿರವರ ಉಪಾಧ್ಯಾಯ ಸಮ್ಮಾನ್ ರಾಜ್ಯಮಟ್ಟದ ಪ್ರಶಸ್ತಿ (2017), ಲಯನ್ಸ್ ರೋಟರಿ ಕ್ಲಬ್, ಮೈಸೂರು ರವರು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ 2017ರ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿರುತ್ತಾರೆ, ಇನ್ನೂ ಹೆಚ್ಚು ಓದಲು ...